ಗುರುವಾರ , ನವೆಂಬರ್ 21, 2019
20 °C

ತಿರುವಳ್ಳುವರ್‌ಗೆ ಕೇಸರಿ ಶಾಲು: ಆರೋಪಿ ಬಂಧನ

Published:
Updated:

ಚೆನ್ನೈ: ತಮಿಳು ಸಂತ ಕವಿ ತಿರುವಳ್ಳುವರ್‌ ಪ್ರತಿಮೆಯನ್ನು ‘ಕೇಸರಿಕರಣ’ಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ನಾಯಕನನ್ನು ಬುಧವಾರ ಬಂಧಿಸಲಾಗಿದೆ.

ಹಿಂದೂ ಮಕ್ಕಳ ಕಟ್ಚಿ ಸಂಘಟನೆಯ ಅಧ್ಯಕ್ಷ ಅರ್ಜುನ್‌ ಸಂಪತ್‌ ಬಂಧಿತ ವ್ಯಕ್ತಿ.

ತಿರುವಳ್ಳುವರ್‌ ಪ್ರತಿಮೆಗೆ ಸೋಮವಾರ ಸೆಗಣಿ ಎರಚಿ ಅವಮಾನಗೊಳಿಸಲಾಗಿದ್ದ ತಂಜಾವೂರ್‌ ಜಿಲ್ಲೆಯ ಪಿಲ್ಲಯಾರಪಟ್ಟಿ ಗ್ರಾಮಕ್ಕೆ ಅರ್ಜುನ್‌ ಸಂಪತ್‌ ಭೇಟಿ ನೀಡಿದ್ದರು. ಏಣಿ ಏರಿದ ಸಂಪತ್‌ ಕೇಸರಿ ಬಣ್ಣದ ಶಾಲು ಮತ್ತು ರುದ್ರಾಕ್ಷಿ ಮಾಲೆ ಹಾಕಿ ದೀಪ ಬೆಳಗಿದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಸಂಪತ್‌ ಅವರನ್ನು ಬಂಧಿಸಿದರು.

ತಿರುವಳ್ಳುವರ್‌ ಕೇಸರಿ ಶಾಲು ಧರಿಸಿರುವ ಮತ್ತು ಹಣೆಯಲ್ಲಿ ವಿಭೂತಿ ಇದ್ದ ಚಿತ್ರವನ್ನು ತಮಿಳುನಾಡು ಬಿಜೆಪಿ ಘಟಕ ಟ್ವಿಟರ್‌ನಲ್ಲಿ ನವೆಂಬರ್‌ 1ರಂದು ಬಿಡುಗಡೆ ಮಾಡಿತ್ತು.

ಪ್ರತಿಕ್ರಿಯಿಸಿ (+)