ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗೆ ಯಾರು ಬೇಕು? ಪ್ರಾಮಾಣಿಕ ಚೌಕೀದಾರ್ ಅಥವಾ ಭ್ರಷ್ಟ ನಾಮ್‍ದಾರ್: ಮೋದಿ 

Last Updated 12 ಏಪ್ರಿಲ್ 2019, 10:20 IST
ಅಕ್ಷರ ಗಾತ್ರ

ಅಹ್ಮದ್‍ನಗರ್: : ದೇಶದ ಹಿತಾಸಕ್ತಿಯನ್ನು ಕಾಪಾಡುವ ಬಗ್ಗೆ ಕಾಂಗ್ರೆಸ್ ಚಿಂತಿಸುವುದಿಲ್ಲ,ಹಾಗಾಗಿ ಜನರು ಬಡತನ ಹೋಗಲಾಡಿಸಲು ಕಾಂಗ್ರೆಸ್‍ನ್ನು ಕಿತ್ತೊಗೆಯಿರಿ' ಎಂಬ ಹೊಸ ಘೋಷಣೆಯನ್ನು ನೀಡಿದ್ದಾರೆ ಎಂದಿದ್ದಾರೆ ನರೇಂದ್ರ ಮೋದಿ.

ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಶುಕ್ರವಾರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರುಕಳೆದ ಐದು ವರ್ಷಗದಳಲ್ಲಿ ಜಗತ್ತು ಬಲಿಷ್ಠ ಮತ್ತು ದೃಢ ಸರ್ಕಾರವನ್ನು ನೋಡಿದೆ.ಇದಕ್ಕಿಂತ ಮುನ್ನ 10 ವರ್ಷ ಆಡಳಿತ ನಡೆಸಿದ ಸರ್ಕಾರ ರಿಮೋಟ್ ಕಂಟ್ರೋಲ್ ಸರ್ಕಾರವಾಗಿತ್ತು.ಆಗ ಹಗರಣಗಳೇ ಸುದ್ದಿಯಾಗುತ್ತಿತ್ತು. ಆದರೆ ಈಗ ಸರ್ಕಾರ ಬಲಿಷ್ಠವಾಗಿದೆ ಎಂದು ಜಗತ್ತೇ ಗುರುತಿಸಿದೆ.

ಚುನಾವಣೆ ಮೂಲಕ ನೀವು ಭವಿಷ್ಯ ನಿರ್ಧರಿಸಲಿದ್ದೀರಿ, ನಿಮಗೆ ಏನು ಬೇಕು ಎಂಬ ಆಯ್ಕೆ ನಿಮ್ಮ ಮುಂದಿದೆ.ನಿಮಗೆ ಪ್ರಾಮಾಣಿಕ ಚೌಕೀದಾರ್ ಬೇಕಾ? ಭ್ರಷ್ಟ ನಾಮ್‍ದಾರ್ ಬೇಕಾ. ನೀವು ಹಿಂದೂಸ್ತಾನದ ಹೀರೋಗಳಿಗೆ ಮತ ಹಾಕಬೇಕೋ?ಅಥವಾ ಪಾಕಿಸ್ತಾನ ಪರ ವಕಾಲತ್ತು ವಹಿಸುವವರಿಗೆ ಮತ ಹಾಕಬೇಕೋ ಎಂದು ನಿರ್ಧಾರ ತೆಗೆದುಕೊಳ್ಳುವವರು ನೀವೇ ಎಂದು ಎಂದಿದ್ದಾರೆ.

ಅಂದಹಾಗೆ ಮೋದಿ, ಇಂದಿನಭಾಷಣದಲ್ಲಿ ಬಾಲಾಕೋಟ್‍ನಲ್ಲಿ ವಾಯುಪಡೆ ನಡೆಸಿದ ದಾಳಿ ಬಗ್ಗೆ ನೇರವಾಗಿ ಹೇಳಲಿಲ್ಲ. ಆದರೆ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದಾಗವಾಯುದಾಳಿ ಬಗ್ಗೆ ಸುತ್ತಿ ಬಳಸಿ ಮಾತನಾಡಿದ್ದಾರೆ. ಗಡಿ ನಿಯಂತ್ರಣದಾಚೆ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಲು ಸೇನಾಪಡೆಗೆ ಯುಪಿಎ ಅಧಿಕಾರ ನೀಡಿರಲಿಲ್ಲ ಎಂದಿದ್ದಾರೆ ಮೋದಿ.

ಕಾಂಗ್ರೆಸ್ ಮತ್ತು ಎನ್‍ಸಿಪಿ ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಿಸಬೇಕು.ದೇಶದಲ್ಲಿ ಇಬ್ಬರು ಪ್ರಧಾನಿಗಳು ಬೇಕು ಎಂದು ವಾದಿಸುತ್ತಿರುವವರ ಪಕ್ಷಗಳ ಪರ ಇದೆ.ನನಗೆ ಕಾಂಗ್ರೆಸ್‍ನಿಂದ ಯಾವುದೇ ನಿರೀಕ್ಷೆ ಇಲ್ಲ. ಆದರೆ ಛತ್ರಪತಿ ಶಿವಾಜಿಯ ನಾಡಿನ ಶರದ್ ರಾವ್ ಪವಾರ್‌ಗೆ ಏನಾಯಿತು? ದೇಶದಲ್ಲಿ ಇಬ್ಬರು ಪ್ರಧಾನಿ ಬೇಕು ಎಂದು ಹೇಳುವವರ ಮುಂದೆ ನೀವು ಎಷ್ಟು ಕಾಲ ಸುಮ್ಮನಿರುತ್ತೀರೀ?

ಕಾಂಗ್ರೆಸ್-ಎನ್‍ಸಿಪಿ ಸರ್ಕಾರದ ಅಧಿಕಾರವಧಿಯಲ್ಲಿ ದೇಶಕ್ಕೆ ತೊಂದರೆಯಾಗಿದ್ದೇ ಜಾಸ್ತಿ.ಮುಂಬೈಯಲ್ಲಿ ಉಗ್ರರ ದಾಳಿ, ಪುಣೆ ಬಾಂಬ್ ಸ್ಫೋಟ ... ನೀವು ಚೌಕೀದಾರ್‌ನ ಆಡಳಿತ ನೋಡಿದ್ದೀರಿ.ಆ ರೀತಿಯ ಘಟನೆಗಳು ನಡೆದಿವೆಯೇ? ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ನಮ್ಮ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ. ಈಚೌಕೀದಾರ್ ಭಯೋತ್ಪಾದಕರಲ್ಲಿ ನಡುಕ ಹುಟ್ಟಿಸಿದ್ದಾನೆ.ಅವರು ಎಲ್ಲೇ ಅಡಗಿದ್ದರೂ ಅವರನ್ನು ಹುಡುಕಿ ತೆಗೆಯತ್ತೇವೆ ಎಂದು ಮೋದಿ ಅಬ್ಬರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT