ಭಾನುವಾರ, ಆಗಸ್ಟ್ 25, 2019
28 °C
ಹಾಂಗ್‌ಕಾಂಗ್‌ನಲ್ಲಿ ಬೀದಿಗಿಳಿದ ಸಾವಿರಾರು ಜನ

ಹಾಂಗ್‌ಕಾಂಗ್‌: ಎಚ್ಚರಿಕೆ ನಡುವೆಯೂ ಪ್ರತಿಭಟನೆ

Published:
Updated:
Prajavani

ಹಾಂಗ್‌ಕಾಂಗ್‌: ಪ್ರತಿಭಟನೆ ನಿಲ್ಲಿಸುವಂತೆ ಚೀನಾ ಎಚ್ಚರಿಕೆಗೆ ಸವಾಲಾಗಿ, ಹಾಂಗ್‌ಕಾಂಗ್‌ನಲ್ಲಿ ಮತ್ತೆ ಪ್ರತಿಭಟನೆ ನಡೆದಿದೆ. 

ಶಂಕಿತ ಅಪರಾಧಿಗಳನ್ನು ವಿಚಾರಣೆಗಾಗಿ ಚೀನಾಗೆ ಹಸ್ತಾಂತರಿಸುವ ಮಸೂದೆ ಜಾರಿಗೆ ಮುಂದಾಗಿರುವ ಸರ್ಕಾರದ ವಿರುದ್ಧ, ಶನಿವಾರ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಮಾಂಗ್‌ಕಾಕ್‌ನ ಮುಖ್ಯರಸ್ತೆಗಳಲ್ಲಿ ರ್‍ಯಾಲಿ ನಡೆಸಿದ ಪ್ರತಿಭಟನಕಾರರು, ಸೋಮವಾರ ನಡೆಯಲಿರುವ ಮುಷ್ಕರದಲ್ಲಿ ಭಾಗವಹಿಸುವಂತೆ ಸ್ಥಳೀಯ ನಿವಾಸಿಗಳಿಗೆ ಕರೆ ನೀಡಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಪ್ರದೇಶದ ಹಲವು ಅಂಗಡಿ ಮುಂಗಟ್ಟುಗಳು, ಶಾಪಿಂಗ್‌ ಮಾಲ್‌ಗಳು ಮುಚ್ಚಿದ್ದವು. 

ಹಾಂಗ್‌ಕಾಂಗ್‌ನಲ್ಲಿ ಎರಡು ತಿಂಗಳಿನಿಂದ ಸತತ ಪ್ರತಿಭಟನೆಳು ನಡೆಯುತ್ತಿವೆ. ಪೊಲೀಸ್‌ ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆಗಳೂ ಸಂಭವಿಸಿವೆ. ‘ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿದಷ್ಟೂ ನಮ್ಮ ಪ್ರತಿಭಟನೆ ಮತ್ತಷ್ಟು ಚುರುಕು ಪಡೆಯಲಿದೆ.

ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಸುಮ್ಮನಿರುವುದಿಲ್ಲ’ ಎಂದು ಪ್ರತಿಭಟನೆಯಲ್ಲಿ ತೊಡಗಿದ್ದ ಆಹ ಕಿಟ್‌ ತಿಳಿಸಿದರು.

Post Comments (+)