ಭಾನುವಾರ, ಆಗಸ್ಟ್ 18, 2019
26 °C

ಕರಾವಳಿ ರಕ್ಷಣಾಪಡೆಯ ನೌಕೆಯಲ್ಲಿ ಬೆಂಕಿ: ಓರ್ವ ವ್ಯಕ್ತಿ ಸಾವು, 28 ಮಂದಿ ಪಾರು

Published:
Updated:

ವಿಶಾಖಪಟ್ಟಣ: ವಿಶಾಖಪಟ್ಟಣದ ಹೊರವಲಯ ಬಂದರಿನ ತೀರದಲ್ಲಿರುವ ಸಹಾಯಕ ನೌಕೆಯಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಅನಾಹುತ ಸಂಭವಿಸಿದೆ. ಈ ನೌಕೆಯಲ್ಲಿ 29 ಸಿಬ್ಬಂದಿಗಳು ಇದ್ದರು ಎಂದು ಕರಾವಳಿ ರಕ್ಷಣಾಪಡೆ ಹೇಳಿದೆ. 

ಇದರಲ್ಲಿ  ಓರ್ವ ಸಾವಿಗೀಡಾಗಿದ್ದು, 28 ಮಂದಿಪಾರಾಗಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

15 ಮಂದಿಗೆ ಗಾಯಗಳಾಗಿದ್ದು,  8ಮಂದಿಗೆ ಸಾಮಾನ್ಯ ಗಾಯಗಳಾಗಿವೆ.  ಗಂಭೀರ ಗಾಯಗೊಂಡಿರುವ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸೋಮವಾರ ಬೆಳಗ್ಗೆ 11.30ಕ್ಕೆ ಸಹಾಯಕ ನೌಕೆ ಕೋಸ್ಟಲ್ ಜಾಗ್ವಾರ್‌ನಲ್ಲಿ ಸ್ಫೋಟ ಸದ್ದು ಕೇಳಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಕರಿ ಹೊಗೆ ದಟ್ಟವಾಗಿ ಆವರಿಸಿಕೊಂಡಿದೆ. ತಕ್ಷಣವೇ ಅದರಲ್ಲಿದ್ದ ಸಿಬ್ಬಂದಿಗಳು ನೀರಿಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
ಬೆಂಕಿ ಅವಘಡ ಸಂಭವಿಸಲು ಕಾರಣ ಏನು ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ
 

Post Comments (+)