ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಕರ್ತವ್ಯಕ್ಕೆ ‘ಮಾನವ ಗುರಾಣಿ’

Last Updated 18 ಏಪ್ರಿಲ್ 2019, 18:40 IST
ಅಕ್ಷರ ಗಾತ್ರ

ಉತ್ಲಿಗಾಂ: ಎರಡು ವರ್ಷಗಳ ಹಿಂದೆ ಶ್ರೀನಗರ ಲೋಕಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಕಲ್ಲು ತೂರಾಟ ನಡೆಸುವವರಿಂದ ರಕ್ಷಣೆ ಪಡೆಯಲು ಸೈನಿಕರು ‘ಮಾನವ ಗುರಾಣಿ‘ಯಾಗಿ ಬಳಸಿಕೊಂಡಿದ್ದ ಫಾರೂಕ್‌ ಅಹಮ್ಮದ್ ದಾರ್‌ ಈ ಬಾರಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

’ಆರೋಗ್ಯ ಇಲಾಖೆಯಲ್ಲಿ ದಿನಗೂಲಿ ಆಧಾರದಲ್ಲಿ ಕಸಗುಡಿಸುವ ಕೆಲಸ ಮಾಡುತ್ತಿರುವ ಫಾರೂಕ್‌ ಅವರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ‘ ಎಂದು ಬುಡ್ಗಾಂನ ಮುಖ್ಯ ವೈದ್ಯಾಧಿಕಾರಿ ನಾಜಿರ್‌ ಅಹಮ್ಮದ್‌ ಹೇಳಿದ್ದಾರೆ.

20017ರಲ್ಲಿ ಫಾರೂಕ್‌ ಅವರನ್ನು ಯೋಧರು ಜೀಪ್‌ನ ಮುಂಭಾಗಕ್ಕೆ ಕಟ್ಟಿರುವ ಚಿತ್ರ ದೇಶದ ಬಹುತೇಕ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟಗೊಂಡಿತ್ತು. ಸೈನಿಕರ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT