ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಾರ್ದಿಕ್‌ ಪಟೇಲ್‌ ಆಸ್ಪತ್ರೆಗೆ

7
ಮೀಸಲಾತಿಗೆ ಒತ್ತಾಯಿಸಿ ಪಟೇಲ್‌ ನಡೆಸುತ್ತಿರುವ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದೆ

ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಾರ್ದಿಕ್‌ ಪಟೇಲ್‌ ಆಸ್ಪತ್ರೆಗೆ

Published:
Updated:
Deccan Herald

ಅಹಮದಾಬಾದ್: ಮೀಸಲಾತಿಗೆ ಆಗ್ರಹಿಸಿ ಪಾಟೀದಾರ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ 13 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಯಿತು.

ಗುರುವಾರದಿಂದ (ಸೆ.6) ನೀರು ಸೇವಿಸುವುದನ್ನೂ ಅವರು ನಿಲ್ಲಿದ್ದರು. ಪಾಟೀದಾರ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಲು ಆಗ್ರಹಿಸಿ ಅವರು ಆಗಸ್ಟ್‌ 25ರಿಂದ ಪ್ರತಿಭಟನೆ ಪ್ರಾರಂಭಿಸಿದ್ದರು.

ಈ ಮಧ್ಯೆ ತಮ್ಮ ಬೆಂಬಲಿಗರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದನ್ನು ಪ್ರತಿಭಟಿಸಲು ಸರ್ಕಾರ ಕಳುಹಿಸಿದ್ದ ವೈದ್ಯರ ತಂಡವನ್ನು ಅವರು ವಾಪಸ್‌ ಕಳುಹಿಸಿದ್ದರು. ಗುಜರಾತ್‌ನ ನಾನಾ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಜನ ಪ್ರತಿಭಟನಾ ಸ್ಥಳಕ್ಕೆ ಬರುತ್ತಿದ್ದಾರೆ.

‘ವಿಲ್‌’ ಬರೆದ ಪಟೇಲ್‌: ಈ ಹೋರಾಟ ನಡೆಯುವಾಗಲೇ ತನ್ನ ಪ್ರಾಣ ಹೋದರೆ ಎಂಬ ಆಲೋಚನೆಯಿಂದ ಸತ್ಯಾಗ್ರಹದ ಒಂಭತ್ತನೆ ದಿನವಾಗಿದ್ದ ಭಾನುವಾರದಂದು ಹಾರ್ದಿಕ್ ಪಟೇಲ್ 'ವಿಲ್' (ಮರಣ ಪತ್ರ) ಘೋಷಣೆ ಮಾಡಿದ್ದರು. 

ಇಳಿದು ಏರಿದ ತೂಕ: ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಾರ್ದಿಕ್‌ ಪಟೇಲ್‌ ಅವರ ದೇಹ ತೂಕ 20 ಕೆ.ಜಿಯಷ್ಟು ಇಳಿಕೆಯಾಗಿದೆ ಎಂದು ಸೆ.4ರ ಮಂಗಳವಾರ ಸೋಲಾ ಸಿವಿಲ್‌ ಆಸ್ಪತ್ರೆಯ ವೈದ್ಯರು ಹೇಳಿದ್ದರು. ಆದರೆ, ಬುಧವಾರ ತಪಾಸಣೆ ನಡೆಸಿದ ವೈದ್ಯರು ಅವರು ತೂಕ ಹೆಚ್ಚಾಗಿದ್ದು 65 ಕೆ.ಜಿಯಾಗಿದೆ ಎಂದು ಹೇಳಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.  

ಬಿಜೆಪಿಯ ಬಂಡಾಯ ಸಂಸದರಾದ ಯಶವಂತ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ ಅವರು ಹಾರ್ದಿಕ್‌ ಅವರನ್ನು ಭೇಟಿಯಾಗಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿದ್ದಾರೆ. ಹಾರ್ದಿಕ್‌ ಮೊಂಡು ಧೋರಣೆ ಕುರಿತು ಪ್ರತಿಕ್ರಿಯಿಸಿರುವ ಗುಜರಾತ್‌ ಸರ್ಕಾರ, ಇದು ಕಾಂಗ್ರೆಸ್‌ ಪ್ರಚೋದನೆಯಿಂದ ನಡೆಯುತ್ತಿರುವ ನಾಟಕ ಎಂದು ಟೀಕಿಸಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !