ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತುಕತೆಗೆ ಹುರಿಯತ್‌ ಸಿದ್ಧ: ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌

Last Updated 22 ಜೂನ್ 2019, 17:45 IST
ಅಕ್ಷರ ಗಾತ್ರ

ಶ್ರೀನಗರ: ಹುರಿಯತ್‌ ಮುಖಂಡರು ಇಂದು ಕೇಂದ್ರ ಸರ್ಕಾರದ ಜೊತೆಗೆ ಚರ್ಚೆಗೆ ಸಿದ್ಧರಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಶನಿವಾರ ಹೇಳಿದ್ದಾರೆ.

ಇಲ್ಲಿ ಹಮ್ಮಿಕೊಂಡಿದ್ದ ದೂರದರ್ಶನ ಸೆಟ್‌ ಟಾಪ್‌ಬಾಕ್ಸ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,’ ಸತ್ತರೆ ಸ್ವರ್ಗ ಸಿಗುತ್ತದೆ ಎಂದು ಯುವಕರನ್ನು ಮರುಳು ಮಾಡಿ ಭಯೋತ್ಪಾದನೆಯತ್ತ ಸೆಳೆಯಲಾಗುತ್ತದೆ. ಅವರು ಅದರಿಂದ ಮರಳಿ ಬಂದರೆ ಎರಡು ಸ್ವರ್ಗ ಸಿಗುತ್ತದೆ. ಒಂದು ಸ್ವರ್ಗ ಕಾಶ್ಮೀರವಾದರೆ ಇನ್ನೊಂದು ನೈಜ ಮುಸ್ಲಿಮರಾಗಿ ಬದುಕುವುದು‘ ಎಂದಿದ್ದಾರೆ.

ಸ್ಥಳೀಯ ಯುವಕರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರ್ಪಡೆಗೊಳಿಸುವ ಕಾರ್ಯ ಬಹುತೇಕ ನಿಂತಿದೆ. ಕಲ್ಲೆಸೆಯುವ ಪ್ರಕರಣಗಳೂ ಸಹ ಕಡಿಮೆಯಾಗಿವೆ ಎಂದು ಹೇಳಿದ್ದಾರೆ.

‘ಪ್ರತಿ ಮನೆಯಲ್ಲೂ ಟಿ.ವಿ’

’ಪ್ರತಿ ಮನೆಯಲ್ಲೂ ಟಿ.ವಿ. ಹೊಂದಿರುವ ವಿಶ್ವದ ಅತಿ ದೊಡ್ಡ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಶೀಘ್ರ ಪಾತ್ರವಾಗಲಿದೆ‘ ಎಂಬ ವಿಶ್ವಾಸವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT