ಅಕ್ರಮ ಆಸ್ತಿ ಸಂಪಾದನೆ: ತೆಲಗಾಂಣ ನ್ಯಾಯಾಧೀಶರ ಬಂಧನ

7

ಅಕ್ರಮ ಆಸ್ತಿ ಸಂಪಾದನೆ: ತೆಲಗಾಂಣ ನ್ಯಾಯಾಧೀಶರ ಬಂಧನ

Published:
Updated:

ಹೈದರಾಬಾದ್‌: ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಜಿಲ್ಲಾ ನ್ಯಾಯಾಧೀಶ ವಿ.ವರಪ್ರಸಾದ್‌ ಅವರನ್ನು ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ಆರೋಪದಡಿಯಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ವಿ.ವರಪ್ರಸಾದ್‌ ಅವರನ್ನು ಬಂಧಿಸಿದ ಪೊಲೀಸರು ಸ್ಥಳೀಯ ನ್ಯಾಯಾಧೀಶರ ಎದುರು ಹಾಜರುಪಡಿಸಿ ಅವರನ್ನು ಚಂಚಲಗುಡ ಜೈಲಿಗೆ ಕಳುಹಿಸಿದ್ದಾರೆ. 

ನ್ಯಾಯಾಧೀಶ ವರಪ್ರಸಾದ್‌ ಮಾರುಕಟ್ಟೆ ದರಕ್ಕಿಂತ ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿರುವ ಆರೋಪದಡಿಯಲ್ಲಿ ಅವರನ್ನು ಬಂಧಿಸಲಾಗಿದೆ. ನಿನ್ನೆ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಅವರ ಮನೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅವರು ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ಬೆಳಕಿಗೆ ಬಂದಿತ್ತು. 

ವರದಪ್ರಸಾದ್‌ ಅವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಮತ್ತು ಭ್ರಷ್ಟಾಚಾರ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. 

ಬರಹ ಇಷ್ಟವಾಯಿತೆ?

  • 12

    Happy
  • 0

    Amused
  • 0

    Sad
  • 2

    Frustrated
  • 3

    Angry

Comments:

0 comments

Write the first review for this !