ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌: ಚಾಕೊಲೇಟ್‌ ಕೇಕ್‌ನಲ್ಲಿ ಹುಳ

ವಿಡಿಯೊ ಹರಿಬಿಟ್ಟ ಗ್ರಾಹಕರು
Last Updated 21 ಸೆಪ್ಟೆಂಬರ್ 2018, 11:11 IST
ಅಕ್ಷರ ಗಾತ್ರ

ಹೈದರಾಬಾದ್: ನಗರದಲ್ಲಿಕಳೆದ ತಿಂಗಳಷ್ಟೇ ಆರಂಭವಾದಭಾರತದ ದೊಡ್ಡ ಫರ್ನಿಚರ್ ಅಂಗಡಿ ‘ಐಕೆಇಎ’ ಆವರಣದಲ್ಲಿರುವರೆಸ್ಟೋರೆಂಟ್‌ನಲ್ಲಿ ದೊರೆಯುತ್ತಿರುವಆಹಾರ ಪದಾರ್ಥಗಳಲ್ಲಿಕ್ರಿಮಿ–ಕೀಟಗಳು ಸಿಗುತ್ತಿವೆ ಎಂದು ಆರೋಪಿಸುತ್ತಿರುವ ಗ್ರಾಹಕರು ವಿಡಿಯೊ, ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸೆ.12ರಂದು ಕಿಶೋರ್ ಎಂಬುವರು ಚಾಕಲೇಟ್ ಕೇಕ್ ಆರ್ಡರ್ ಮಾಡಿದ್ದರು. ಇವರ ಮಗಳು ಊಟ ಮಾಡಿದ ನಂತರ ಕೇಕ್‌ ತಿನ್ನಲು ಹೋದಾಗ ಕೇಕ್ ತುಂಡಿನಲ್ಲಿ ಇರುವೆ ಕಾಣಿಸಿದೆ.ಕೇಕ್‌ನಲ್ಲಿ ಇರುವೆ ಹರಿದಾಡುತ್ತಿರುವುದನ್ನು ವಿಡಿಯೊ ಮಾಡಿ ಬಿಲ್ ಸಮೇತ ಹೈದರಾಬಾದ್‌ ಪೊಲೀಸ್‌ ಹಾಗೂ ಪುರಸಭೆಗೆ ಟ್ಯಾಗ್ ಮಾಡಿದ್ದರು.

ಇದನ್ನು ಪರಿಶೀಲಿಸಿದ ಪುರಸಭೆ ಬುಧವಾರ (ಸೆ.19) ₹5ಸಾವಿರ ದಂಡ ವಿಧಿಸಿದೆ.

ಇದೇ ರೆಸ್ಟೋರೆಂಟ್‌ನಿಂದ ತರಿಸಿದ್ದ ಬಿರಿಯಾನಿಯಲ್ಲಿ ಕಂಬಳಿಹುಳು ದೊರೆತಿದೆ ಎಂದು ಮತ್ತೊಬ್ಬರು ಗ್ರಾಹಕರು ಈ ಹಿಂದೆ ಟ್ವಿಟ್ ಮಾಡಿದ್ದರು.

ಈ ಬಗ್ಗೆ ಕ್ಷಮೆಯಾಚಿಸಿರುವ ರೆಸ್ಟೋರೆಂಟ್ ವಕ್ತಾರ, ಗ್ರಾಹಕರಿಗೆ ನಮ್ಮಿಂದಾದ ತೊಂದರೆ ಬಗ್ಗೆ ಕ್ಷಮೆ ಕೋರುತ್ತೇವೆ. ಮುಂದಿನ ದಿನಗಳಲ್ಲಿ ಈ ರೀತಿ ಪ್ರಮಾದವಾಗದಂತೆ ಎಚ್ಚರ ವಹಿಸುತ್ತೇವೆ ಎಂದು ಹೇಳಿದ್ದಾರೆ.

ಐಕೆಇಎ ರೆಸ್ಟೋರೆಂಟ್

13 ಎಕರೆ ಪ್ರದೇಶದಲ್ಲಿರುವ ಭಾರತದ ದೊಡ್ಡ ಫರ್ನಿಚರ್ ಅಂಗಡಿಯಲ್ಲಿ1000 ಆಸನಗಳನ್ನು ಹೊಂದಿರುವ ರೆಸ್ಟೊರೆಂಟ್ ಇದೆ.ಭಾರತ ಸೇರಿದಂತೆ ವಿಶ್ವದ ವಿವಿಧ ಶೈಲಿಯ ಆಹಾರಗಳನ್ನು ಇದು ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT