ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ಕಾಣೆಯಾದ ವ್ಯಕ್ತಿ ದುಬೈನಲ್ಲಿ ಪ್ರತ್ಯಕ್ಷ, ಭಾರತಕ್ಕೆ ಬರಲು ಹಣವಿಲ್ಲ

Last Updated 30 ಜನವರಿ 2020, 7:11 IST
ಅಕ್ಷರ ಗಾತ್ರ

ಹೈದರಾಬಾದ್ (ತೆಲಂಗಾಣ): ವರ್ಷದ ಹಿಂದೆ ದುಬೈನಲ್ಲಿ ಕಾಣೆಯಾಗಿದ್ದ ಯುವಕನೊಬ್ಬ ಈ ವರ್ಷ ಪತ್ತೆಯಾಗಿದ್ದು ಆತನನ್ನು ಕರೆತರಲು ಹಣದ ಸಹಾಯ ಮಾಡಬೇಕೆಂದು ಆತನ ಸೋದರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಹಮದ್ ಅಬ್ದುಲ್ ವಹಾಬ್ ಕಾಣೆಯಾಗಿದ್ದ ವ್ಯಕ್ತಿ. ಈತ ದುಬೈನಲ್ಲಿ ಪತ್ತೆಯಾಗಿದ್ದು, ಆತನನ್ನು ಕರೆತರಲು ವಿಮಾನದ ಟಿಕೆಟ್ ಖರೀದಿಸುವಷ್ಟು ಹಣ ತಮ್ಮ ಕುಟುಂಬದಲ್ಲಿಇಲ್ಲ. ಆದ್ದರಿಂದ ಕೇಂದ್ರಸರ್ಕಾರ ಸಹಾಯ ಮಾಡಿ ಸೋದರನನ್ನು ಕರೆತರಬೇಕೆಂದು ಮನವಿ ಮಾಡಿದ್ದಾರೆ.

ವಹಾಬ್ ಕಳೆದ ವರ್ಷ ಜನವರಿ 17ರಂದು ದುಬೈನ ಮನೆಯಿಂದ ಕಾಣೆಯಾಗಿದ್ದ. ನಂತರ ಆತ ಪತ್ತೆಯಾಗಿರಲಿಲ್ಲ. ಮನೆಯವರು ಭಾರತದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡು ಆತನನ್ನು ಹುಡುಕಿಕೊಡುವಂತೆ ಕೋರಿದ್ದರು. ಆದರೆ, ಒಂದುವರ್ಷವಾದರೂ ಪತ್ತೆಯಾಗಿರಲಿಲ್ಲ. 12 ತಿಂಗಳ ನಂತರ ಆತ ದುಬೈನಲ್ಲಿ ಇರುವುದು ಪತ್ತೆಯಾಯಿತು. ಕೂಡಲೆ ಆತನನ್ನು ಸಂಪರ್ಕಿಸಿ ಮಾತನಾಡಿದಾಗ ಆತನ ಬಳಿ ವಾಪಸ್ ಬರುವಷ್ಟು ಹಣ ಇಲ್ಲ ಎಂದಿದ್ದಾನೆ. ಇಲ್ಲಿ ತಮ್ಮ ಬಳಿಯೂ ಹಣ ಇಲ್ಲ. ತುಂಬಾ ಸಮಸ್ಯೆಯಾಗಿರುವುದರಿಂದ ತಮಗೆ ಕೇಂದ್ರ ಸರ್ಕಾರ ಸಹಾಯ ಮಾಡಬೇಕು, ವಹಾಬ್ ಈಗ ಸ್ನೇಹಿತನ ಮನೆಯಲ್ಲಿದ್ದು ಸುರಕ್ಷಿತವಾಗಿದ್ದಾನೆ ಎಂದು ಮಾಧ್ಯಮಗಳ ಎದುರು ವಹಾಬ್ ಸೋದರ ಮಹಮದ್ ಅಬ್ದುಲ್ ರವೂಫ್ ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT