‘ನನಗೆ ಮದುವೆಯಾಗಿದೆ’ ಎಂದ ರಾಹುಲ್ ಗಾಂಧಿ!

7
2019ರಲ್ಲಿ ಮೋದಿ ಪ್ರಧಾನಿಯಾಗಲಾರರು ಎಂದ ಕಾಂಗ್ರೆಸ್ ಅಧ್ಯಕ್ಷ

‘ನನಗೆ ಮದುವೆಯಾಗಿದೆ’ ಎಂದ ರಾಹುಲ್ ಗಾಂಧಿ!

Published:
Updated:

ಹೈದರಾಬಾದ್: ‘ನಾನು ಈಗಾಗಲೇ ವಿವಾಹವಾಗಿದ್ದೇನೆ’. ಇದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ನೀಡಿದ ಹೇಳಿಕೆ!

ಆದರೆ, ಅವರು ಹೇಳಿದ್ದು ಯಾವುದೇ ಸ್ತ್ರೀಯನ್ನು ಉದ್ದೇಶಿಸಿ ಅಲ್ಲ. ಪಕ್ಷವನ್ನು ಉದ್ದೇಶಿಸಿ. ಸಂವಾದ ಕಾರ್ಯಕ್ರಮವೊಂದರಲ್ಲಿ ಮದುವೆ ಬಗ್ಗೆ ಪ್ರಶ್ನೆ ಕೇಳಿಬಂದಾಗ, ‘ನನಗೆ ಈಗಾಗಲೇ ಪಕ್ಷದ ಜತೆ ವಿವಾಹವಾಗಿದೆ’ ಎಂದು ರಾಹುಲ್ ಉತ್ತರಿಸಿದರು.

ಎರಡು ದಿನಗಳ ಹೈದರಾಬಾದ್ ಪ್ರವಾಸದಲ್ಲಿರುವ ರಾಹುಲ್, ‘2019ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಲಾರರು. ಬಿಜೆಪಿಗೆ 230 ಸ್ಥಾನಗಳೂ ದೊರೆಯಲಾರವು. ಹೀಗಾಗಿ ಮೋದಿ ಪ್ರಧಾನಿಯಾಗುವ ಪ್ರಶ್ನೆಯೇ ಇಲ್ಲ’ ಎಂದರು.

‘ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಬಿಜೆಪಿಯೇತರ ಪಕ್ಷಗಳ ಮೈತ್ರಿಯಿಂದಾಗಿ ಬಿಜೆಪಿಗೆ ಹಿನ್ನಡೆಯಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಆದರೆ, ಕಾಂಗ್ರೆಸ್ ಮತ್ತು ಇತರ ಬಿಜೆಪಿಯೇತರ ಪಕ್ಷಗಳು ಬಹುಮತ ಗಳಿಸಿದರೆ ಯಾರು ಪ್ರಧಾನಿಯಾಗಲಿದ್ದಾರೆ ಎಂಬ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಲಿಲ್ಲ.

ಸಮಾನ ಮನಸ್ಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳಲು ಪಕ್ಷದ ರಾಜ್ಯ ಘಟಕಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಪಕ್ಷದ ಸ್ಥಿತಿ ಸುಧಾರಿಸುತ್ತಿದೆ ಎಂದು ರಾಹುಲ್ ಹೇಳಿದರು.

ಬರಹ ಇಷ್ಟವಾಯಿತೆ?

 • 4

  Happy
 • 6

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !