ವಾಯುಸೇನೆಗೆ ಸೇರ್ಪಡೆಗೊಂಡ ಚಿನೂಕ್‌ ಹೆಲಿಕಾಪ್ಟರ್‌ಗಳು

ಸೋಮವಾರ, ಏಪ್ರಿಲ್ 22, 2019
29 °C

ವಾಯುಸೇನೆಗೆ ಸೇರ್ಪಡೆಗೊಂಡ ಚಿನೂಕ್‌ ಹೆಲಿಕಾಪ್ಟರ್‌ಗಳು

Published:
Updated:
Prajavani

ಚಂಡೀಗಡ : ಅತೀ ಭಾರ ಹೊರುವ ಅಮೆರಿಕ ನಿರ್ಮಿತ ನಾಲ್ಕು ಚಿನೂಕ್‌ ಹೆಲಿಕಾಪ್ಟರ್‌ಗಳನ್ನು ಸೋಮವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಯುಪಡೆಗೆ ಸೇರ್ಪಡೆಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಭಾರತೀಯ ವಾಯುಪಡೆಯ ಮುಖ್ಯಸ್ಥ ಬಿ.ಎಸ್‌.ಧನೋಆ, ‘ಯುದ್ಧ ವಿಮಾನಗಳಲ್ಲಿ ರಫೇಲ್‌ ಮಾಡುವ ಬದಲಾವಣೆಗಳಂತೆಯೇ, ಚಿನೂಕ್‌ ಕೂಡ ಇದೇ ರೀತಿ ಸೇನೆಗೆ ಉಪಯುಕ್ತವಾಗಲಿದೆ’ ಎಂದರು.

ಸಿಎಚ್‌–47ಎಫ್‌ (ಐ) ಮಾದರಿಯ 15 ಚಿನೂಕ್ ಹೆಲಿಕಾಪ್ಟರ್‌ಗಳ ಖರೀದಿಗೆ 2015ರ ಸೆಪ್ಟೆಂಬರ್‌ನಲ್ಲಿ ಬೋಯಿಂಗ್‌ ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮೊದಲ ಹಂತದಲ್ಲಿ ನಾಲ್ಕು ಚಿನೂಕ್‌ ಹೆಲಿಕಾಪ್ಟರ್‌ಗಳು ಭಾರತಕ್ಕೆ ಪೂರೈಕೆಯಾಗಿದೆ.

ಎರಡು ಇಂಜಿನ್‌, ನೇರವಾಗಿ ಮೇಲಕ್ಕೇರುವ ಸಾಮರ್ಥ್ಯ ಹೊಂದಿದ್ದು, ಅತ್ಯಂತ ದುರ್ಗಮ ಪ್ರದೇಶಗಳಿಗೆ ಸೇನೆ, ಶಸ್ತ್ರಾಸ್ತ್ರ ಹಾಗೂ ಇಂಧನವನ್ನು ಕೊಂಡೊಯ್ಯಲು ಸಹಕಾರಿಯಾಗಲಿದೆ.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !