ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಗಡಿಯಲ್ಲಿ ಸುಸಜ್ಜಿತ ಹೆಲಿಕಾಪ್ಟರ್‌ಗಳ ನಿಯೋಜನೆಗೆ ಮುಂದಾದ ಭಾರತೀಯ ವಾಯುಪಡೆ

Last Updated 22 ಅಕ್ಟೋಬರ್ 2018, 20:21 IST
ಅಕ್ಷರ ಗಾತ್ರ

ನವದೆಹಲಿ: ಈಶಾನ್ಯ ಭಾಗದಲ್ಲಿ ಚೀನಾದ ಗಡಿಯಲ್ಲಿ ಭದ್ರತೆ ಇನ್ನಷ್ಟು ಬಿಗಿಗೊಳಿಸಲು ಭಾರತೀಯ ವಾಯುಪಡೆ ಮುಂದಾಗಿದೆ. ಅಲ್ಲಿ ಸಂಪೂರ್ಣ ಶಸ್ತ್ರಸಜ್ಜಿತ ಅಪಾಚೆ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ.

ಅಪಾಚೆಯ ಮೊದಲ ತಂಡ 2019ರ ಜುಲೈನಲ್ಲಿ ವಾಯುಪಡೆಗೆ ಸೇರ್ಪ‍ಡೆಯಾಗಲಿದೆ. ಈ ಹೆಲಿಕಾಪ್ಟರ್‌ಗಳಿಗಾಗಿ ಅಸ್ಸಾಂನ ಜೊರ್ಹಾತ್‌ ಮತ್ತು ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ನೆಲೆ ರೂಪಿಸಲಾಗಿದೆ.

ಪಶ್ಚಿಮದ ಗಡಿಯಲ್ಲಿ ಎಂಐ–35 ಹೆಲಿಕಾಪ್ಟರ್‌ಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಈಶಾನ್ಯದಲ್ಲಿ ಇಂತಹ ಪ್ರಯತ್ನ ಇದೇ ಮೊದಲು.

ಅಪಾಚೆ 64ಡಿ ಬ್ಲಾಕ್‌–3 ದರ್ಜೆಯ 22 ದಾಳಿ ಹೆಲಿಕಾಪ್ಟರ್‌ಗಳನ್ನು ಅಮೆರಿಕದಿಂದ ಖರೀದಿಸಲಾಗಿದೆ. ಮೂರು ವರ್ಷ ಹಿಂದೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ವಾಯುಪಡೆಯ ಅಧಿಕಾರಿಗಳಿಗೆ ಹೊಸ ಹೆಲಿಕಾಪ್ಟರ್‌ ಬಳಕೆ ಬಗ್ಗೆ ಅಲಬಾಮಾದಲ್ಲಿ ತರಬೇತಿ ನೀಡಲಾಗಿದೆ.

ಚಿನೂಕ್‌ ಹೆಲಿಕಾಪ್ಟರ್‌ಗಳನ್ನು ಕೂಡ ಅಮೆರಿಕದಿಂದ ಖರೀದಿಸಲಾಗಿದೆ. ಮುಂದಿನ ಫೆಬ್ರುವರಿಯಲ್ಲಿ ಈ ಹೆಲಿಕಾಪ್ಟರ್‌ಗಳು ಪೂರೈಕೆಯಾಗಲಿವೆ. ಈ ಎರಡು ಅತ್ಯಾಧುನಿಕ ಹೆಲಿಕಾಪ್ಟರ್‌ಗಳ ಸೇರ್ಪಡೆಯಿಂದ ವಾಯುಪಡೆಯ ಯುದ್ಧ ಸಾಮರ್ಥ್ಯ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT