ಪಾಕ್ ವಶದಲ್ಲಿದ್ದಾಗ ಮಾನಸಿಕ ಹಿಂಸೆ ನೀಡಿದ್ದರು: ವಿಂಗ್ ಕಮಾಂಡರ್ ಅಭಿನಂದನ್

ಶುಕ್ರವಾರ, ಮಾರ್ಚ್ 22, 2019
26 °C

ಪಾಕ್ ವಶದಲ್ಲಿದ್ದಾಗ ಮಾನಸಿಕ ಹಿಂಸೆ ನೀಡಿದ್ದರು: ವಿಂಗ್ ಕಮಾಂಡರ್ ಅಭಿನಂದನ್

Published:
Updated:

ನವದೆಹಲಿ: ಪಾಕಿಸ್ತಾನದ ವಶದಲ್ಲಿದ್ದಾಗ ಅವರು ದೈಹಿಕ ಹಿಂಸೆ ನೀಡಿರಲಿಲ್ಲ. ಆದರೆ ಸಿಕ್ಕಾಪಟ್ಟೆ ಮಾನಸಿಕ ಹಿಂಸೆ ನೀಡಿದ್ದರು ಎಂದು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಿಗ್ 21 ವಿಮಾನದಲ್ಲಿ ಪಾಕಿಸ್ತಾನ ಎಫ್-16 ಫೈಟರ್ ವಿಮಾನವನ್ನು ಬೆನ್ನಟ್ಟಿ ಹೋಗಿ ಹೊಡೆದುರುಳಿಸಿ ವಿಮಾನ ಪತನಗೊಂಡು ಪಾಕ್ ನೆಲದ ಮೇಲೆ ಬಿದ್ದ ವಾಯುಪಡೆಯ ಪೈಲಟ್ ಅಭಿನಂದನ್‍ನ್ನು ಪಾಕ್ ಸೇನೆ ಬುಧವಾರ ವಶ ಪಡಿಸಿಕೊಂಡಿತ್ತು. ಸರಿ ಸುಮಾರು 58 ಗಂಟೆಗಳ ಕಾಲ ಪಾಕ್ ವಶದಲ್ಲಿದ್ದ ಅಭಿನಂದನ್ ಅವರನ್ನು ಶಾಂತಿಯ ಸಂಕೇತವಾಗಿ ಬಿಡುಗಡೆಗೊಳಿಸುವುದಾಗಿ ಪಾಕ್ ಸಂಸತ್ತಿನಲ್ಲಿ ಗುರುವಾರ ಇಮ್ರಾನ್ ಖಾನ್ ಘೋಷಿಸಿದ್ದರು. ಇದಾದ ನಂತರ ಶುಕ್ರವಾರ ರಾತ್ರಿ 9.20ಕ್ಕೆ ಅಭಿನಂದನ್‍ನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿತ್ತು.

ಭಾರತಕ್ಕೆ ವಾಘಾ- ಅಟ್ಟಾರಿ ಗಡಿ ಮೂಲಕ ಪ್ರವೇಶಿಸಿದ ಅಭಿನಂದನ್‍ನ್ನು ವೈದ್ಯಕೀಯ ಪರೀಕ್ಷೆಗಾಗಿ ದೆಹಲಿಗೆ ಕರೆದೊಯ್ಯಲಾಗಿದೆ. ನವದೆಹಲಿಯ ಸುಬ್ರತೋ ಪಾರ್ಕ್ ನಲ್ಲಿರುವ ವಾಯುಪಡೆಯ ವೈದ್ಯಕೀಯ ಕೇಂದ್ರದಲ್ಲಿ ಇವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 33

  Happy
 • 6

  Amused
 • 4

  Sad
 • 4

  Frustrated
 • 5

  Angry

Comments:

0 comments

Write the first review for this !