ಪಾಕ್ ಡ್ರೋಣ್ ಹೊಡೆದುರುಳಿಸಿದ ಭಾರತದ ವಾಯುಪಡೆ

ಭಾನುವಾರ, ಮಾರ್ಚ್ 24, 2019
31 °C

ಪಾಕ್ ಡ್ರೋಣ್ ಹೊಡೆದುರುಳಿಸಿದ ಭಾರತದ ವಾಯುಪಡೆ

Published:
Updated:

ಜೈಪುರ: ರಾಜಸ್ಥಾನದ ಭಾರತ- ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಭಾಗದಲ್ಲಿ ಹಾರಾಡುತ್ತಿದ್ದ ಪಾಕಿಸ್ತಾನದ ಡ್ರೋಣ್‍ನ್ನು ಭಾರತೀಯ ವಾಯುಪಡೆ ವಿಮಾನ ಹೊಡೆದುರುಳಿಸಿದೆ.
ಸೋಮವಾರ ಬೆಳಗ್ಗೆ 11.30ರ ಹೊತ್ತಿಗೆ ಅಪರಿಚಿತ ಡ್ರೋಣ್ ಈ ಭಾಗದಲ್ಲಿ ಹಾರಾಡಿದೆ ಎಂದು ರಕ್ಷಣಾ ಪಡೆಯ ಮೂಲಗಳು ಹೇಳಿವೆ.
 

ಸುಖೋಯ್ 30MKI ವಿಮಾನ ಬಳಸಿ ಭಾರತ ಈ ಡ್ರೋಣ್ ಹೊಡೆದುರುಳಿಸಿದೆ. ಈ ಡ್ರೋಣ್ ಪಳೆಯುಳಿಕೆ ಪಾಕಿಸ್ತಾನದ ಕಡೆ ಬಿದ್ದಿದೆ. ಬಿಕಾನೇರ್‌ನ ನಾಲ್ ಸೆಕ್ಟರ್‌ನಲ್ಲಿ ಹಾರಾಡುತ್ತಿದ್ದ  ಡ್ರೋಣ್ ಅನ್ನು ಭಾರತೀಯ ರಕ್ಷಣಾ ಪಡೆಯ ರಡಾರ್‌ಗಳು ಪತ್ತೆ ಹಚ್ಚಿದ್ದವು.

 

ಬರಹ ಇಷ್ಟವಾಯಿತೆ?

 • 39

  Happy
 • 3

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !