ಮಿತ್ರರು ಬಯಸಿದರೆ ಮಾತ್ರ ಪ್ರಧಾನಿ: ರಾಹುಲ್‌

7

ಮಿತ್ರರು ಬಯಸಿದರೆ ಮಾತ್ರ ಪ್ರಧಾನಿ: ರಾಹುಲ್‌

Published:
Updated:

ನವದೆಹಲಿ (ಪಿಟಿಐ): ಮಿತ್ರ ಪಕ್ಷಗಳು ಬಯಸಿದರೆ ತಾವು ಪ್ರಧಾನಿ ಆಗಬಹುದು, ಆದರೆ ಅದು ಮುಖ್ಯವಲ್ಲ. ವಿರೋಧ ಪಕ್ಷಗಳೆಲ್ಲ ಒಂದಾಗಿ ಬಿಜೆಪಿಯನ್ನು ಸೋಲಿಸುವುದೇ ಈಗಿನ ಮುಖ್ಯ ವಿಚಾರ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. 

ಈ ಎರಡು ಹಂತಗಳ ಪ್ರಕ್ರಿಯೆಯಲ್ಲಿ ಪ್ರಧಾನಿ ಯಾರಾಗಬೇಕು ಎನ್ನುವುದು ಎರಡನೇ ಹಂತದಲ್ಲಿರುವ ಪ್ರಶ್ನೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಎಚ್‌ಟಿ ನಾಯಕತ್ವ ಶೃಂಗಸಭೆಯಲ್ಲಿ ಭಾಗವಹಿಸಿದ ರಾಹುಲ್‌ ಅವರು ತಮ್ಮ ದೇವಸ್ಥಾನ ಭೇಟಿಯಿಂದ ಆರಂಭಿಸಿ ಆರ್‌ಎಸ್‌ಎಸ್‌ವರೆಗಿನ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. 

‘ದೇವಸ್ಥಾನ, ಗುರುದ್ವಾರ ಮತ್ತು ಮಸೀದಿಗಳಿಗೆ ಹಲವು ವರ್ಷಗಳಿಂದ ಹೋಗುತ್ತಿದ್ದೇನೆ. ಆದರೆ ಈಗ ಅದಕ್ಕೆ ದಿಢೀರ್‌ ಪ್ರಚಾರ ನೀಡಲಾಗುತ್ತಿದೆ. ನಾನು ದೇವಸ್ಥಾನಗಳಿಗೆ ಹೋಗುವುದು ಬಹುಶಃ ಬಿಜೆಪಿಗೆ ಇಷ್ಟ ಇಲ್ಲ. ಇದು ಅವರಲ್ಲಿ ಆಕ್ರೋಶ ಉಂಟು ಮಾಡುತ್ತಿದೆ. ಬಿಜೆಪಿಯವರು ಮಾತ್ರ ದೇವಸ್ಥಾನಗಳಿಗೆ ಹೋಗಬೇಕು ಎಂದು ಆ ಪಕ್ಷ ಭಾವಿಸಿದೆ’ ಎಂದು ರಾಹುಲ್‌ ಹೇಳಿದ್ದಾರೆ. 

ತಾವು ದಪ್ಪ ಚರ್ಮ ಬೆಳೆಸಿಕೊಂಡಿರುವುದಾಗಿಯೂ ಅವರು ಹೇಳಿದರು. ಹಾಗಾಗಿ ಟೀಕೆಗಳು ಅರ್ಥವಾದರೂ ಅದರಿಂದ ವಿಚಲಿತಗೊಳ್ಳದಿರುವುದು ಸಾಧ್ಯವಾಗುತ್ತಿದೆ. ಎಲ್ಲರನ್ನೂ ಆಲಿಸುವುದು ತಮ್ಮ ಪ್ರತಿಕ್ರಿಯೆ ಎಂದು ಅವರು ವಿವರಿಸಿದರು. 

ಆರ್‌ಎಸ್‌ಎಸ್‌ ಅನ್ನು ಉಲ್ಲೇಖಿಸಿ ಮಾತನಾಡಿದ ಅವರು, 120 ಕೋಟಿ ಭಾರತೀಯರ ಮೇಲೆ ಉಸಿರುಗಟ್ಟಿಸುವ ಒಂದೇ ಸಿದ್ಧಾಂತ ಹೇರಲು ಯತ್ನಿಸಲಾಗುತ್ತಿದೆ. ಬಿಜೆಪಿ ವಿರುದ್ಧ ಹೋರಾಡುವ ಸೈದ್ಧಾಂತಿಕ ಕೇಂದ್ರವೊಂದು ಇದ್ದರೆ ಅದು ಕಾಂಗ್ರೆಸ್‌ ಮಾತ್ರ ಎಂದೂ ಅವರು ಹೇಳಿದರು. 

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !