ಪಾಕ್ ಉಗ್ರತ್ವ ನಿಲ್ಲಿಸಿದರೆ ‘ನೀರಜ್ ಚೋಪ್ರಾ ರೀತಿ’ ಅನುಸರಣೆ

7
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್

ಪಾಕ್ ಉಗ್ರತ್ವ ನಿಲ್ಲಿಸಿದರೆ ‘ನೀರಜ್ ಚೋಪ್ರಾ ರೀತಿ’ ಅನುಸರಣೆ

Published:
Updated:
Deccan Herald

ನವದೆಹಲಿ: ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸಿದರೆ, ಭಾರತ ಸೇನೆ ಸಹ ‘ನೀರಜ್ ಚೋಪ್ರಾ ರೀತಿ’ ಪ್ರತಿಕ್ರಿಯಿಸುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.

ಏಷ್ಯನ್ ಕ್ರೀಡಾಕೂಟದ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಅಥ್ಲೀಟ್ ನೀರಜ್ ಚೋಪ್ರಾ, ಕಂಚು ಗೆದ್ದ ಪಾಕಿಸ್ತಾನದ ಅಥ್ಲೀಟ್‌ ಅರ್ಷದ್ ನದೀಮ್ ಅವರ ಕೈ ಕುಲುಕಿ ಕ್ರೀಡಾ ಮನೋಭಾವ ತೋರಿದ್ದರು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.‌

ಭಾರತ–ಪಾಕಿಸ್ತಾನ ಗಡಿಯಲ್ಲಿ ‘ಕ್ರೀಡಾಮನೋಭಾವ’ ತೋರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಭಯೋತ್ಪಾದನೆ ನಿಲ್ಲಿಸಲು ಪಾಕ್‌ ಮೊದಲ ಹೆಜ್ಜೆ ಇರಿಸಬೇಕು’ ಎಂದರು. ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದ ಅಥ್ಲೀಟ್‌ಗಳನ್ನು ಸೇನೆಯಿಂದ ಸನ್ಮಾನಿಸಿದ ವೇಳೆ ರಾವತ್‌ ಈ ವಿಷಯ ಉಲ್ಲೇಖಿಸಿ ಮಾತನಾಡಿದರು.

ಭಯೋತ್ಪಾದನೆ ಹೆಚ್ಚುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ ಇದಕ್ಕೆ ವಿರೋಧಾಭಾಸವಾಗಿ, ಕಳೆದ ಒಂದೆರಡು ತಿಂಗಳಲ್ಲಿ ತೀವ್ರವಾದಿಗಳಾಗಿ ಬಂದೂಕು ಕೈಗೆತ್ತಿಕೊಳ್ಳುವ ಸ್ಥಳೀಯ ಯುವಜನತೆ ಶರಣಾಗುತ್ತಿರುವ/ಭದ್ರತಾ ಪಡೆಗಳಿಂದ ಬಂಧನವಾಗುತ್ತಿರುವ ಅಥವಾ ಹತ್ಯೆಯಾಗುತ್ತಿರುವ ಪ್ರಕ್ರಿಯೆ ನಡೆಯುತ್ತಿದೆ. ಸೇನೆಯ ಈ ಕಾರ್ಯಾಚರಣೆ ಮುಂದುವರಿಯುತ್ತದೆ’ ಎಂದು ರಾವತ್ ತಿಳಿಸಿದ್ದಾರೆ.

‘ಹಲವು ಪ್ರಕರಣಗಳಲ್ಲಿ ತಾಯಂದಿರು ತಮ್ಮ ಪುತ್ರರಿಗೆ ತೀವ್ರವಾದಿತ್ವ ಬಿಟ್ಟು ವಾಪಸಾಗಲು ಕೋರಿದ್ದಾರೆ. ಈ ರೀತಿ ಮುಂದುವರಿದರೆ ನಾವು ಭಯೋತ್ಪಾದನೆ ಹತ್ತಿಕ್ಕಲು ಸಾಧ್ಯ ಎನ್ನುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !