ಮಂಗಳವಾರ, ನವೆಂಬರ್ 19, 2019
22 °C

ಐಐಟಿ ದೆಹಲಿ: ಬಾಹ್ಯಾಕಾಶ ತಂತ್ರಜ್ಞಾನ ಕೋಶ ಸ್ಥಾಪನೆ

Published:
Updated:

ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಹಯೋಗದಲ್ಲಿ ಐಐಟಿ ದೆಹಲಿ ಬಾಹ್ಯಾಕಾಶ ತಂತ್ರಜ್ಞಾನ ಕೋಶ(ಎಸ್‌ಟಿಸಿ) ರಚಿಸಲಿದೆ. 

ಎಸ್‌ಟಿಸಿ ರಚನೆ ಕುರಿತು ಐಐಟಿ ದೆಹಲಿ ನಿರ್ದೇಶಕ ವಿ. ರಾಮ್‌ ಗೋಪಾಲ್‌ ರಾವ್‌ ಶುಕ್ರವಾರ ಮಾಹಿತಿ ನೀಡಿದರು. ‘ಇಸ್ರೊ ಸಹಯೋಗದಲ್ಲಿ ಈ ಕೋಶ ಕಾರ್ಯನಿರ್ವಹಿಸಲಿದ್ದು, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆಗಳು ನಡೆಯಲಿವೆ’ ಎಂದರು.. ಐಐಎಸ್ಸಿ ಬೆಂಗಳೂರು, ಐಐಟಿ ಬಾಂಬೆ, ಐಐಟಿ ಕಾನ್ಪುರ, ಐಐಟಿ ಮದ್ರಾಸ್‌, ಐಐಟಿ ಗುಹಾವಟಿಯಲ್ಲಿ ಈಗಾಗಲೇ ಎಸ್‌ಟಿಸಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಸಾಲಿಗೆ ಐಐಟಿ ದೆಹಲಿ ಸೇರಿದೆ.

ಪ್ರತಿಕ್ರಿಯಿಸಿ (+)