ಸೋಮವಾರ, ಜುಲೈ 26, 2021
27 °C

ಪರಸ್ಪರ ಅಂತರ ಎಚ್ಚರಿಸಲು ಕೃತಕ ಬುದ್ಧಿಮತ್ತೆ ಆಧರಿತ ಪರಿಕರ ಸಿದ್ಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದರ ನಿರ್ವಹಣೆಗಾಗಿ ಐಐಟಿ–ಖರಗ್‌ಪುರ್‌ನ ಸಂಶೋಧಕರ ತಂಡವೊಂದು ಕೃತಕ ಬುದ್ಧಿಮತ್ತೆ ಆಧರಿತ ವ್ಯವಸ್ಥೆಯನ್ನು ರೂಪಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾಧ್ಯಾಪಕರಾದ ದೇಬಶೀಶ್‌ ಚಕ್ರವರ್ತಿ ಮತ್ತು ಆದಿತ್ಯ ಬಂಡೋಪಾಧ್ಯಾಯ ನೇತೃತ್ವದ ತಂಡವು ಕಡಿಮೆ ವೆಚ್ಚದ ಈ ಪರಿಕರರವನ್ನು ಅಭಿವೃದ್ಧಿಪಡಿಸಿದೆ.

ಪರಸ್ಪರ ಅಂತರ ಕಾಯ್ದುಕೊಳ್ಳುವಲ್ಲಿ ನಿಯಮ ಉಲ್ಲಂಘನೆ ಆದ ಸಂದರ್ಭದಲ್ಲಿ ಶಬ್ಧದ ಮೂಲಕ ಪರಿಕರ ಎಚ್ಚರಿಸಲಿದೆ. ಇದು, ಸ್ಥಳದ ಚಿತ್ರವನ್ನು ಗ್ರಹಿಸಲಿದ್ದು, ಕೇಂದ್ರ ಸಚಿವಾಲಯವು ನಿಗದಿಪಡಿಸಿದ ಪ್ರಮಾಣಕ್ಕೆ ಅನುಗುಣವಾಗಿ ಅಂತರ ಇದೆಯೇ ಎಂದು ತಿಳಿಸಲಿದೆ.

ಕಡಿಮೆ ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಸುಲಭವಾಗಿ ಲಭ್ಯವಿದ್ದ ಪರಿಕರಗಳನ್ನು ಬಳಸಿಯೇ ಇದನನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ ಎಂದು ಐಐಟಿ–ಕೆಜಿಪಿಯ ವಕ್ತಾರರು ತಿಳಿಸಿದ್ದಾರೆ.

ಐಐಟಿ ಕ್ಯಾಂಪಸ್‌ನಲ್ಲಿ ಮೂರು ಕಡೆ ಈ ಪರಿಕರ ಅಳವಡಿಸಿ ಇದರ ಕಾರ್ಯಶೈಲಿಯ ಪ್ರಯೋಗವನ್ನು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು