ಮೌಲ್ಯಾಂಕ ಪ್ರಕ್ರಿಯೆಗೆ ಐಐಟಿ, ಐಐಎಂ ಸೇರ್ಪಡೆ: ಜಾವಡೇಕರ್

7

ಮೌಲ್ಯಾಂಕ ಪ್ರಕ್ರಿಯೆಗೆ ಐಐಟಿ, ಐಐಎಂ ಸೇರ್ಪಡೆ: ಜಾವಡೇಕರ್

Published:
Updated:
Deccan Herald

 ನವದೆಹಲಿ : ಉನ್ನತ ಶಿಕ್ಷಣ ಸಂಸ್ಥೆಗಳಿಗೆ ತ್ವರಿತವಾಗಿ ಮೌಲ್ಯಾಂಕ ಮತ್ತು ಮಾನ್ಯತೆ ನೀಡುವ ಪ್ರಕ್ರಿಯೆಯಲ್ಲಿ ಐಐಟಿ ಹಾಗೂ ಐಐಎಂಗಳನ್ನೂ ತೊಡಗಿಸಿಕೊಳ್ಳಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. 

‘ರಾಷ್ಟ್ರೀಯ ಮೌಲ್ಯಾಂಕ ಮತ್ತು ಮಾನ್ಯತಾ ಮಂಡಳಿ (ನ್ಯಾಕ್–ಎನ್‌ಎಎಸಿ) ಹಾಗೂ ರಾಷ್ಟ್ರೀಯ ಮಾನ್ಯತಾ ಮಂಡಳಿಯನ್ನು (ಎನ್‌ಬಿಎ) ವಿಸ್ತರಿಸಲು ಚಿಂತನೆ ನಡೆಸಲಾಗಿದ್ದು, ಐಐಟಿ ಮತ್ತು ಐಐಎಂಗಳಿಗೆ ಈ ಮಂಡಳಿಯನ್ನು ಸೇರಿಕೊಳ್ಳುವಂತೆ ತಿಳಿಸಲಾಗಿದೆ’ ಎಂದು ಜಾಗತಿಕ ಮಟ್ಟದ ನಾಲ್ಕನೇ ಮೌಲ್ಯಾಂಕ ಸಮಾವೇಶದ ವೇಳೆ ಅವರು ತಿಳಿಸಿದ್ದಾರೆ. 

‘ಶೈಕ್ಷಣಿಕ ಫಲಿತಾಂಶ, ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಆಧರಿಸಿ ಮೌಲ್ಯಾಂಕ ನೀಡಲಾಗುತ್ತದೆ. ಶೈಕ್ಷಣಿಕ ಸಂಸ್ಥೆಗಳ ಗುಣಮಟ್ಟ ನಿರ್ಧರಿಸಲು ಶಿಕ್ಷಣದ ಗುಣಮಟ್ಟವೇ ಮಾನದಂಡ’ ಎಂದು ಅವರು ಹೇಳಿದ್ದಾರೆ.  ಮೌಲ್ಯಾಂಕ ನೀಡುವ ಮಂಡಳಿಗಳ ಸಾಮರ್ಥ್ಯ ಹೆಚ್ಚಿಸುವ ಪ್ರಸ್ತಾವವನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಆಗಸ್ಟ್‌ನಲ್ಲಿ ಅಂಗೀಕರಿಸಿದ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ. 

ಪ್ರಸ್ತುತ ದೇಶದಲ್ಲಿ ಕೇವಲ ಶೇ 15ರಷ್ಟು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಮೌಲ್ಯಾಂಕ ನೀಡಲಾಗಿದೆ. 

‘ಮೌಲ್ಯಾಂಕವಿಲ್ಲದೆ ಪ್ರವೇಶಾತಿ ಇಲ್ಲ’: ಪ್ರಧಾನಿ ನರೇಂದ್ರ ಮೋದಿ ಅವರ ಕನಸಾದ ‘ನವಭಾರತ’ ನಿರ್ಮಾಣಕ್ಕಾಗಿ 2022–23ರಿಂದ ‘ಮೌಲ್ಯಾಂಕ ಇಲ್ಲದಿದ್ದರೆ ಪ್ರವೇಶಾತಿ ಇಲ್ಲ’ ಎನ್ನುವ ನಿಯಮ ಅಳವಡಿಸಬೇಕು ಎಂದು ಉನ್ನತ ಶಿಕ್ಷಣ ಕಾರ್ಯದರ್ಶಿ ಆರ್. ಸುಬ್ರಮಣಿಯಂ ಸಲಹೆ ನೀಡಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !