ಇಮ್ರಾನ್ ಹೇಳಿಕೆಗೆ ವಿಪಕ್ಷಗಳ ಕಳವಳ

ಬುಧವಾರ, ಏಪ್ರಿಲ್ 24, 2019
30 °C

ಇಮ್ರಾನ್ ಹೇಳಿಕೆಗೆ ವಿಪಕ್ಷಗಳ ಕಳವಳ

Published:
Updated:

ನವದೆಹಲಿ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್ ನೀಡಿರುವ ಹೇಳಿಕೆ ಬಗ್ಗೆ ವಿಪಕ್ಷಗಳು ತೀವ್ರ ಕಳವಳ ವ್ಯಕ್ತಪಡಿಸಿವೆ.

‘ವಿದೇಶಿ ಸರ್ಕಾರಗಳು ನಮ್ಮ ಚುನಾವಣೆಯನ್ನು ಪ್ರಭಾವಿಸುತ್ತಿವೆ. ಭಾರತಕ್ಕೆ ಮತ್ತೆ ಪ್ರಧಾನಿಯಾಗಿ ಮೋದಿಯೇ ಆಯ್ಕೆಯಾಗಬೇಕು ಎಂದು ಈ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹೇಳಿತ್ತು. ಈಗ ಪಾಕ್‌ ಪ್ರಧಾನಿಯೇ ಆ ಮಾತು ಹೇಳಿದ್ದಾರೆ. ಆದರೆ ಮೋದಿ ಮಾತ್ರ ಪಾಕಿಸ್ತಾನದ ಜತೆಗೆ ವಿರೋಧ ಪಕ್ಷಗಳಿಗೆ ಸಂಬಂಧ ಕಲ್ಪಿಸಲು ಪ್ರಯತ್ನಿಸುತ್ತಲೇ ಇದ್ದಾರೆ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕಿಸಿದ್ದಾರೆ.

‘ಭಾರತದ ಆಂತರಿಕ ವಿಚಾರದಲ್ಲಿ ತಲೆ ಹಾಕಲು ಇಮ್ರಾನ್ ಖಾನ್ ಯಾರು? ಭಾರತದ ಪ್ರಧಾನಿ ಯಾರಾಗಬೇಕು ಎಂಬುದನ್ನು ಭಾರತದ ಜನರು ನಿರ್ಧರಿಸುತ್ತಾರೆ. ಅದು ಇಮ್ರಾನ್ ಖಾನ್‌ನ ಕೆಲಸವಲ್ಲ. ಎರಡು ದೇಶಗಳ ನಡುವಣ ಸಮಸ್ಯೆಯನ್ನು ಬೇರೆ ಪಕ್ಷಗಳು ಬಗೆಹರಿಸುವುದಿಲ್ಲ ಎಂದು ಇಮ್ರಾನ್ ಅದು ಹೇಗೆ ಹೇಳುತ್ತಾರೆ’ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

**

ಭಾರತದ ಸೇನಾನೆಲೆಗೆ ಪಾಕ್‌ನ ಐಎಸ್‌ಐ ಅನ್ನು ಆಹ್ವಾನಿಸಿದ, ಆಹ್ವಾನ ಇರದಿದ್ದರೂ ಪಾಕ್‌ಗೆ ಭೇಟಿ ನೀಡಿದ ಏಕೈಕ ಪ್ರಧಾನಿ ಮೋದಿ. ಈಗ ಮತ್ತೆ ಅವರೇ ಪ್ರಧಾನಿ ಆಗಬೇಕು ಎಂದು ಪಾಕ್‌ ಬಯಸುತ್ತಿದೆ
ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

**

ತಮ್ಮ ಪರ ಇಮ್ರಾನ್‌ ಖಾನ್ ಮಾತನಾಡುತ್ತಿರುವುದು ಏಕೆ ಎಂಬುದನ್ನು ಮೋದಿ ವಿವರಿಸಬೇಕು. ಅಥವಾ ತಮ್ಮ ಪರ ಮಾತನಾಡಿ ಎಂದು ಖಾನ್ ಅವರನ್ನು ಮೋದಿಯೇ ಕೇಳಿಕೊಂಡಿದ್ದರೆ?
ಡಿ.ರಾಜಾ, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !