ಪಾಕ್‌ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಪ್ರಮಾಣ: ಪ್ರಧಾನಿ ಮೋದಿಗೂ ಆಹ್ವಾನ?

7
ಆಗಸ್ಟ್‌ 11ರಂದು

ಪಾಕ್‌ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಪ್ರಮಾಣ: ಪ್ರಧಾನಿ ಮೋದಿಗೂ ಆಹ್ವಾನ?

Published:
Updated:

ಲಾಹೋರ್‌: ‘ಮುಂದಿನ ತಿಂಗಳು ನಡೆಯಲಿರುವ ನೂತನ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಗಳ (ಸಾರ್ಕ್‌) ಮುಖ್ಯಸ್ಥರನ್ನು ಆಹ್ವಾನಿಸಲು ತೆಹ್ರೀಕ್‌ ಎ ಇನ್ಸಾಫ್‌ (ಪಿಟಿಐ) ಚಿಂತನೆ ನಡೆಸಿದೆ’ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಜುಲೈ 25ರಂದು ನಡೆದ ರಾಷ್ಟ್ರೀಯ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಫಲಿತಾಂಶದ ಕುರಿತಂತೆ ಮಾತನಾಡಿದ್ದ ಅವರು, ಇದೇ ಆಗಸ್ಟ್ 11 ರಂದು ‍ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವುದಾಗಿ ತಿಳಿಸಿದ್ದರು.

‘ವಿದೇಶಾಂಗ ಇಲಾಖೆಯ ಅಧಿಕಾರಿಗಳ ಜೊತೆ ಪಕ್ಷದ ಪ್ರಮುಖರು ಚರ್ಚೆ ನಡೆಸಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಪಿಟಿಐ ಪಕ್ಷದ ವಕ್ತಾರ ಪವಾದ್‌ ಚೌಧರಿ ತಿಳಿಸಿದರು. 

ಚುನಾವಣೆಯಲ್ಲಿ ಪಿಟಿಐ ಪಕ್ಷ ಜಯಗಳಿಸಿದ ಬಳಿಕ ಇಮ್ರಾನ್‌ ಖಾನ್‌ಗೆ ಸೋಮವಾರ ದೂರವಾಣಿ ಕರೆಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದರು. ಇದಕ್ಕೂ ಮುನ್ನ ಮಾತನಾಡಿದ್ದ ಇಮ್ರಾನ್‌ ಖಾನ್‌, ‘ದ್ವಿಪಕ್ಷೀಯ ಸಂಬಂಧ ನಿಟ್ಟಿನಲ್ಲಿ ಪಾಕಿಸ್ತಾನ ಮತ್ತು ಭಾರತವೂ ಜತೆಯಾಗಿ ಕೆಲಸ ಮಾಡುವ ಹೊಸ ಅಧ್ಯಾಯ ಬರೆಯಬೇಕು’ ಎಂದು ತಿಳಿಸಿದ್ದರು.

 

 

 

 

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !