ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ನುಸುಳುಕೋರರ ವಿರುದ್ಧ ಎಂಎನ್‌ಎಸ್ ರ‍್ಯಾಲಿ

Last Updated 9 ಫೆಬ್ರುವರಿ 2020, 13:17 IST
ಅಕ್ಷರ ಗಾತ್ರ

ಮುಂಬೈ: ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ನುಸುಳುಕೋರರನ್ನು ಹೊರಹಾಕಬೇಕು ಎಂದು ಒತ್ತಾಯಿಸಿ ರಾಜ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಭಾನುವಾರ ರ‍್ಯಾಲಿ ಆಯೋಜಿಸಿದೆ.

ಭಾನುವಾರ ಮಧ್ಯಾಹ್ನ ದಕ್ಷಿಣ ಮುಂಬೈಯ ಹಿಂದೂ ಜಿಮ್‌ಖಾನಾದಿಂದ ಈರ‍್ಯಾಲಿ ಆರಂಭವಾಗಿದೆ. ರಾಜ್ಠಾಕ್ರೆ ನೇತೃತ್ವದ ಮೊದಲ ರ‍್ಯಾಲಿ ಇದಾಗಿದ್ದು, ಮುಂಬೈಯಿಂದ ಹೊರಗಿರುವ ಕಾರ್ಯಕರ್ತರು ಇದರಲ್ಲಿಭಾಗವಹಿಸಲು ಆಗಮಿಸಿದ್ದಾರೆ.

ರ‍್ಯಾಲಿ ಆರಂಭವಾಗುವ ಮುನ್ನ ಪ್ರಭಾದೇವಿಯಲ್ಲಿರುವ ಸಿದ್ದಿವಿನಾಯಕ ದೇವಾಲಯಕ್ಕ ಭೇಟಿ ನೀಡಿದ ಠಾಕ್ರೆಅಲ್ಲಿಂದ ಜಿಮ್‌ಖಾನ್ ಬಂದಿದ್ದಾರೆ. ರ‍್ಯಾಲಿಯಲ್ಲಿ ಭಾಗವಹಿಸುವುದಕ್ಕಾಗಿ ಸಾವಿರಾರು ಎಂಎನ್‌ಎಸ್ ಕಾರ್ಯಕರ್ತರು 11 ಗಂಟೆಗೆ ಜಿಮ್‌ಖಾನಾದಲ್ಲಿ ಜಮಾಯಿಸಿದ್ದರು. ಕಲ್ಯಾಣ್, ಥಾಣೆ, ಪುಣೆ ಮತ್ತು ನಾಶಿಕ್‌ನಿಂದಲೂ ಕಾರ್ಯಕರ್ತರು ಬಂದು ಸೇರಿದ್ದರು. ಜಿಮ್‌ಖಾನಾದಿಂದ ಹೊರಟ ಈ ರ‍್ಯಾಲಿ ಆಜಾದ್ ಮೈದಾನದಲ್ಲಿ ಕೊನೆಗೊಳ್ಳಲಿದೆ.

ಜನರು ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ನುಸುಳುಕೋರರಿಂದ ಬೇಸತ್ತು ಹೋಗಿದ್ದಾರೆ. ಅವರನ್ನು ದೇಶದಿಂದ ಹೊರಗೆ ಹಾಕಬೇಕಿದೆ. ನಮಗೆ ಉತ್ತಮ ಬೆಂಬಲ ಸಿಗುತ್ತಿದೆ ಎಂದು ಎಂಎನ್‌ಎಸ್ ವಕ್ತಾರ ಸಂದೀಪ್ ದೇಶ್‌ಪಾಂಡೆ ಹೇಳಿದ್ದಾರೆ.

ನುಸುಳುಕೋರರು ನಮ್ಮ ಶತ್ರುಗಳು ಅವರನ್ನು ದೇಶದಿಂದ ಹೊರಹಾಕಲೇ ಬೇಕು ಎಂದು ಎಂಎನ್‌ಎಸ್ ಇತ್ತೀಚೆಗೆ ಅಭಿಯಾನ ಶುರು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT