ಮಂಗಳವಾರ, ಮೇ 26, 2020
27 °C

ಕಳೆದ 12 ಗಂಟೆಗಳಲ್ಲಿ ದೇಶದಾದ್ಯಂತ 302 ಕೊರೊನಾ ಪ್ರಕರಣ ದೃಢ: ಆರೋಗ್ಯ ಇಲಾಖೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 12 ಗಂಟೆ ಅವಧಿಯಲ್ಲಿ 302 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿವೆ.

ಒಟ್ಟು ಸೋಂಕಿತರ ಸಂಖ್ಯೆ 3,374 ತಲುಪಿದ್ದು, 77 ಮಂದಿ ಮೃತಪಟ್ಟಿದ್ದಾರೆ. 267 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾನುವಾರ ಬೆಳಿಗ್ಗೆ 9 ಗಂಟೆಗೆ ಬಿಡುಗಡೆ ಮಾಡಿರುವ ಬುಲೆಟಿನ್‌ನಲ್ಲಿ ತಿಳಿಸಿದೆ.

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ತಲಾ ಒಂದೊಂದು ಹೊಸ ಪ್ರಕರಣಗಳು ದೃಢಪಟ್ಟಿವೆ.

ಮಹಾರಾಷ್ಟ್ರದಲ್ಲಿ ಅತಿಹೆಚ್ಚು, ಅಂದರೆ 24 ಸಾವು ಸಂಭವಿಸಿದೆ. ಗುಜರಾತ್‌ನಲ್ಲಿ 10, ತೆಲಂಗಾಣದಲ್ಲಿ 7, ಮಧ್ಯಪ್ರದೇಶ, ದೆಹಲಿಯಲ್ಲಿ ತಲಾ 6 ಮತ್ತು ಪಂಜಾಬ್‌ನಲ್ಲಿ 5 ಸಾವು ವರದಿಯಾಗಿದೆ.

ಇದನ್ನೂ ಓದಿ: 

ಕರ್ನಾಟಕದಲ್ಲಿ 4, ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ತಲಾ 3 ಮಂದಿ ಮೃತಪಟ್ಟಿದ್ದಾರೆ. ಜಮ್ಮು–ಕಾಶ್ಮೀರ, ಉತ್ತರ ಪ್ರದೇಶ ಮತ್ತು ಕೇರಳದಲ್ಲಿ ತಲಾ 2 ಮಂದಿ ಮೃತಪಟ್ಟಿದ್ದಾರೆ.

ಆಂಧ್ರ ಪ್ರದೇಶ, ಬಿಹಾರ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಅತಿ ಹೆಚ್ಚು ಕೊರೊನಾ ಪ್ರಕರಣಗಳು ಮಹಾರಾಷ್ಟ್ರದಲ್ಲಿ (490) ದೃಢಪಟ್ಟಿವೆ. ಉಳಿದಂತೆ ತಮಿಳುನಾಡಿನಲ್ಲಿ 485, ದೆಹಲಿಯಲ್ಲಿ 445 ಪ್ರಕರಣಗಳು ದೃಢಪಟ್ಟಿವೆ. ಕೇರಳದಲ್ಲಿ ಈವರೆಗೆ 306 ಪ್ರಕರಣಗಳು ದೃಢಪಟ್ಟಿದ್ದರೆ ತೆಲಂಗಾಣದಲ್ಲಿ 269 ಮತ್ತು ಉತ್ತರ ಪ್ರದೇಶದಲ್ಲಿ 227 ಪ್ರಕರಣಗಳು ದೃಢಪಟ್ಟಿವೆ.

ರಾಜಸ್ಥಾನದಲ್ಲಿ 200, ಆಂಧ್ರ ಪ್ರದೇಶದಲ್ಲಿ 161, ಪ್ರಕರಣ ದಾಖಲಾಗಿದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ. ಗುಜರಾತ್‌ನಲ್ಲಿ ಸೋಂಕಿತರ ಸಂಖ್ಯೆ 105ಕ್ಕೆ, ಮಧ್ಯ ಪ್ರದೇಶದಲ್ಲಿ 104ಕ್ಕೆ ಏರಿಕೆಯಾಗಿದೆ.

ಜಮ್ಮು–ಕಾಶ್ಮೀರದಲ್ಲಿ ಈವರೆಗೆ 92 ಮತ್ತು ಪಶ್ಚಿಮ ಬಂಗಾಳದಲ್ಲಿ 69 ಪ್ರಕರಣಗಳು ದೃಢಪಟ್ಟಿವೆ. ಪಂಜಾಬ್‌ನಲ್ಲಿ 57, ಹರಿಯಾಣದಲ್ಲಿ 49, ಬಿಹಾರದಲ್ಲಿ 30, ಅಸ್ಸಾಂನಲ್ಲಿ 24, ಉತ್ತರಾಖಂಡದಲ್ಲಿ 22, ಒಡಿಶಾದಲ್ಲಿ 20, ಚಂಡೀಗಡದಲ್ಲಿ 18 ಮತ್ತು ಲಡಾಕ್‌ನಲ್ಲಿ 14 ಪ್ರಕರಣಗಳು ದೃಢಪಟ್ಟಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು