ಸ್ವಾತಂತ್ರ್ಯ ಸಂಭ್ರಮಕ್ಕೆ ಕೆಂಪು ಕೋಟೆಗೆ ದೀಪಾಲಂಕಾರ, ಖಾದಿ ಧ್ವಜಕ್ಕೆ ಒತ್ತು

7

ಸ್ವಾತಂತ್ರ್ಯ ಸಂಭ್ರಮಕ್ಕೆ ಕೆಂಪು ಕೋಟೆಗೆ ದೀಪಾಲಂಕಾರ, ಖಾದಿ ಧ್ವಜಕ್ಕೆ ಒತ್ತು

Published:
Updated:

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಮೂರು ದಿನ ಮಾತ್ರ ಬಾಕಿ ಇದೆ. ಅಂದು ಎಲ್ಲೆಡೆ ದೇಶ ಭಕ್ತಿಯ ಸಂಭ್ರಮ ಮನೆ ಮಾಡುವ ದಿನವದು. 

ಆಗಸ್ಟ್‌ 15ರ ಮಹತ್ವದ ಈ ದಿನದ ಅಂಗವಾಗಿ ದೆಹಲಿಯ ಕೆಂಪುಕೋಟೆಗೆ ದೀಪಾಲಂಕಾರ ಮಾಡಲಾಗಿದೆ. ದೀಪದ ಬೆಳಕಿನಲ್ಲಿ ಕೋಟೆ ಕಂಗೊಳಿಸುತ್ತಿದೆ. 

ಜಗಮಗಿಸುವ ಬೆಳಕಿನಾಟದಲ್ಲಿ ಕೋಟೆ ಹೊಸದೊಂದು ಮೆರಗು ಪಡೆದಂತೆ ತೋರುತ್ತಿದೆ. ಇದರ ಚಿತ್ರಗಳು ಮತ್ತು ವಿಡಿಯೊ ಸಹಿತ ಎಎನ್‌ಐ ವರದಿ ಮಾಡಿದೆ.

ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಈ ಕೋಟೆಯ ಮೇಲೆ ತ್ರಿವರ್ಣ ಧ್ವಜಾರೋಹಣ ನೆರವೇರಿಸುತ್ತಾರೆ. ಅಲ್ಲಿಂದಲೇ ಸ್ವಾತಂತ್ರ್ಯೋತ್ಸವದ ಭಾಷಣವನ್ನೂ ಮಾಡುತ್ತಾರೆ.

ಅಸ್ಸಾಂನದಲ್ಲಿ ಪ್ಲಾಸ್ಟಿಕ್‌ ಬದಲಿಗೆ ಖಾದಿ, ಪೇಪರ್‌ ಧ್ವಜ

ಅಸ್ಸಾಂನ ಗುವಾಹಟಿಯ ಮಾರುಕಟ್ಟೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಧ್ವಜಗಳ ಬದಲಿಗೆ ಖಾದಿ ಮತ್ತು ಕಾಗದದ ರಾಷ್ಟ್ರ ಧ್ವಜಗಳು ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿವೆ.

ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರ ಧ್ವಜಗಳನ್ನು ಬಳಸದಂತೆ ಕೇಂದ್ರ ಸರ್ಕಾರ ನಾಗರಿಕರಿಗೆ ಮನವಿ ಮಾಡಿತ್ತು.
 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !