ಗುರುವಾರ , ಡಿಸೆಂಬರ್ 3, 2020
19 °C

ಸೋಲ್‌: ಭಾರತೀಯ ಸಮುದಾಯದವರ ಜತೆ ಪ್ರಧಾನಿ ಮೋದಿ ಸಂವಾದ

ಪಿಟಿಐ Updated:

ಅಕ್ಷರ ಗಾತ್ರ : | |

ಸೋಲ್: ‘ಭಾರತವು ಮುಂದಿನ 15 ವರ್ಷಗಳಲ್ಲಿ ವಿಶ್ವದ ಮೂರನೇ ಅತ್ಯಂತ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಮೋದಿ ಅವರು ಇಲ್ಲಿನ ಭಾರತೀಯ ಸಮುದಾಯದವರ ಜತೆ ನಡೆದ ಸಂವಾದದ ವೇಳೆ ಈ ಮಾತು ಹೇಳಿದ್ದಾರೆ.

‘ಇಲ್ಲಿರುವ ಪ್ರತಿಯೊಬ್ಬ ಭಾರತೀಯರೂ ರಾಷ್ಟ್ರೀಯ ದೂತರು. ಭಾರತ ಮತ್ತು ದಕ್ಷಿಣ ಕೊರಿಯಾದ ಸಂಬಂಧ ಗಟ್ಟಿಯಾದುದು. ಸಾವಿರಾರು ಸಂಖ್ಯೆಯಲ್ಲಿ ಭಾರತೀಯರು ಇಲ್ಲಿ ನೆಲೆಸಿದ್ದಾರೆ. ಇಲ್ಲಿನ ಕಂಪನಿಗಳಾದ ಎಲ್‌ಜಿ, ಹುಂಡೈ ಮತ್ತು ಸ್ಯಾಮ್ಸಂಗ್‌ಗಳು ಭಾರತದ ಹಳ್ಳಿ–ಹಳ್ಳಿಗಳಲ್ಲೂ ಮನೆ ಮಾತಾಗಿವೆ’ ಎಂದು ಮೋದಿ ಹೇಳಿದ್ದಾರೆ.

‘ಕೊರಿಯಾದಲ್ಲಿ ಭಾರತೀಯ ಸಿನಿಮಾಗಳು ಜನಪ್ರಿಯತೆ ಪಡೆಯುತ್ತಿವೆ. ಇಲ್ಲಿನ ರಸ್ತೆಗಳಲ್ಲಿ ಭಾರತೀಯ ಹೋಟೆಲುಗಳಿವೆ. ಇಲ್ಲಿ ಭಾರತೀಯ ತಿನಿಸುಗಳು ಸಿಗುತ್ತವೆ. ಈಗ ಕೊರಿಯಾದ ಮಕ್ಕಳ ಬಾಯಲ್ಲೂ ‘ಕಬ್ಬಡಿ–ಕಬ್ಬಡಿ’ ಕೇಳುತ್ತಿದೆ. ಇದಕ್ಕೆಲ್ಲಾ ಇಲ್ಲಿರುವ ಭಾರತೀಯರೇ ಕಾರಣ’ ಎಂದು ಮೋದಿ ಪ್ರಶಂಸೆ ವ್ಯಕ್ತಪಡಿಸಿದರು. ‘ಇದು ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ವರ್ಷ.

ಅವರಿಗೆ ಸಿಗಬೇಕಿದ್ದ ಪ್ರಾಮುಖ್ಯತೆ ಸಿಕ್ಕಿಲ್ಲ. ಜಗತ್ತಿನ ಪ್ರತಿ ಮಗುವೂ ಗಾಂಧೀಜಿಯನ್ನು ನೆನಪಿಸಿಕೊಳ್ಳುವಂತೆ ನಾವು ಮಾಡುತ್ತೇವೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು