ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಳಲ್ಲಿ ಮತದಾನ ಬಿರುಸು

Last Updated 13 ಮೇ 2018, 10:17 IST
ಅಕ್ಷರ ಗಾತ್ರ

ಮುಂಡಗೋಡ: ಮತದಾನದಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂ ಡರು. ಅಂಗವಿಕಲರು, ವೃದ್ಧರು ಸಹಾಯಕರೊಂದಿಗೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.

ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬಟನ್‌ ಒತ್ತುವ ಮೂಲಕ ಮತಪೆಟ್ಟಿಗೆಯಲ್ಲಿ ಭದ್ರಪಡಿಸಿದ್ದಾರೆ. ತಾಲ್ಲೂಕಿನ 88 ಮತಗಟ್ಟೆಯಲ್ಲಿ ಮತದಾರರು ಹಕ್ಕು ಚಲಾಯಿಸಿದರು. ಎಲ್ಲ ಮತಗಟ್ಟೆಗಳಲ್ಲಿ ಇವಿಎಂಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದವು. ನಿಗದಿತ ಸಮಯಕ್ಕೆ ಆರಂಭವಾದ ಮತದಾನಕ್ಕೆ ಬೆಳಿಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಗ್ರಾಮೀಣ ಭಾಗದಲ್ಲಿ ಮತದಾನ ಬಿರುಸಿನಿಂದ ಕೂಡಿತ್ತು. ಬೆಳಿಗ್ಗೆಯಿಂದ ಮತಗಟ್ಟೆಗಳಲ್ಲಿ ಸರದಿಯಲ್ಲಿ ನಿಂತಿದ್ದ ಮತದಾರರು ಸೂರ್ಯ ನೆತ್ತಿ ಸುಡುವ ಮುನ್ನವೇ ಮತ ಚಲಾಯಿಸಲು ಮುಂದಾಗಿದ್ದರು. ಮಧ್ಯಾಹ್ನ ಮಂದಗತಿಯಿಂದ ಸಾಗಿದ ಮತದಾನ 3ಗಂಟೆ ನಂತರ ವೇಗ ಪಡೆಯಿತು.

ತಾಲ್ಲೂಕಿನ ಇಂದೂರ, ಹುನಗುಂದ, ಅಗಡಿ, ಬಾಚಣಕಿ, ಸನವಳ್ಳಿ, ಅಜ್ಜಳ್ಳಿ, ಕಾತೂರ, ಓಣಿಕೇರಿ, ಹನುಮಾಪುರ, ಪಾಳಾ, ಮಳಗಿ ಸೇರಿದಂತೆ ಬಹುತೇಕ ಭಾಗಗಳಲ್ಲಿ ಜನ ಉತ್ಸಾಹದಿಂದ ಮತಚಲಾಯಿಸಿದರು. ವೃದ್ಧರು ಕುಟುಂಬದವರೊಂದಿಗೆ ಬಂದಿದ್ದರು.

ಪಟ್ಟಣದ ಶಾಸಕರ ಮಾದರಿ ಶಾಲೆಯ ಮತಗಟ್ಟೆ, ಲಂಬಾಣಿ ತಾಂಡಾದ ಮತಗಟ್ಟೆ, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಕಚೇರಿ ಮತಗಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು. ಉಳಿದೆಡೆ ಬೆಳಿಗ್ಗೆ 11ಗಂಟೆ ವರೆಗೆ ಇದ್ದ ಜನಸಂದಣಿ ಮಧ್ಯಾಹ್ನದ ವೇಳೆಗೆ ಕಡಿಮೆಯಾಗಿ ನಂತರ ಚುರುಕಾಗಿತ್ತು. ತಾಲ್ಲೂಕಿನ ಅಂದಲಗಿಯ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ವಿ.ಎಸ್‌.ಪಾಟೀಲ ಅವರು ಪತ್ನಿಯೊಂದಿಗೆ ಬಂದು ವೋಟ್‌ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT