ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಚ್ಚಾತೈಲಕ್ಕೆ ಪರ್ಯಾಯ ಮೂಲ ಕಂಡುಕೊಳ್ಳಿ’

Last Updated 28 ಜೂನ್ 2018, 18:53 IST
ಅಕ್ಷರ ಗಾತ್ರ

ನವದೆಹಲಿ: ‘ಇರಾನ್‌ನಿಂದ ಕಚ್ಚಾತೈಲ ಆಮದು ನಿಂತುಹೋದರೆ, ಅದಕ್ಕೆ ಪರ್ಯಾಯವಾಗಿ ಏನು ಮಾಡಬಹುದು ಎಂಬುದರ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿಕೊಳ್ಳಿ’ ಎಂದು ಕೇಂದ್ರ ಸರ್ಕಾರವು ತೈಲ ಕಂಪನಿಗಳಿಗೆ ಸೂಚಿಸಿದೆ. ಇರಾನ್‌ನಿಂದ ಕಚ್ಚಾತೈಲ ಆಮದನ್ನು ನವೆಂಬರ್ 4ರ ಒಳಗೆ ನಿಲ್ಲಿಸಿ ಎಂದು ಅಮೆರಿಕ ಹೇಳಿರುವ ಬೆನ್ನಲ್ಲೇ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮಗಳ ಕಾರಣ ಅಮೆರಿಕವು ಅದರ ಮೇಲೆ ನಿರ್ಬಂಧ ಹೇರಿದೆ. ಹೀಗಾಗಿ ಅಮೆರಿಕದ ಡಾಲರ್‌ನ ಮೂಲಕ ಇರಾನ್‌ ಜತೆ ಯಾವುದೇ ದೇಶಗಳು ವಹಿವಾಟು ನಡೆಸಲು ಸಾಧ್ಯವಿಲ್ಲ.

‘ಅಮೆರಿಕ ಏಕಪಕ್ಷೀಯವಾಗಿ ಹೇರುವ ನಿರ್ಬಂಧವನ್ನು ನಾವು ಪಾಲಿಸುವುದಿಲ್ಲ. ಆದರೆ ವಿಶ್ವಸಂಸ್ಥೆಯ ನಿರ್ಬಂಧಗಳನ್ನು ಪಾಲಿಸುತ್ತೇವೆ. ನಮ್ಮ ರೂಪಾಯಿಯಲ್ಲೇ ವಹಿವಾಟು ನಡೆಸಲು ಇರಾನ್ ಒಪ್ಪಿದರೆ, ನವೆಂಬರ್ 4ರ ನಂತರವೂ ಅಲ್ಲಿಂದ ಇಂಧನ ಆಮದು ಮಾಡಿಕೊಳ್ಳಬಹುದು’ ಎಂದು ಇಂಧನ ಸಚಿವಾಲಯದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT