ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid–19 India Update: ರೋಗಮುಕ್ತವಾಗಿದ್ದ ಗೋವಾದಲ್ಲಿ 8 ಪ್ರಕರಣ ಪತ್ತೆ

Last Updated 14 ಮೇ 2020, 15:42 IST
ಅಕ್ಷರ ಗಾತ್ರ

ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೆಬ್‌ಸೈಟ್ ಪ್ರಕಾರ ದೇಶದಲ್ಲಿ ಕೊರೊನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 78003 ಆಗಿದೆ. ಇಲ್ಲಿಯವರೆಗೆ 26235 ಮಂದಿ ಚೇತರಿಸಿಕೊಂಡಿದ್ದು, ಸಾವಿನಸಂಖ್ಯೆ 2549ಕ್ಕೇರಿದೆ

ಒಂದು ತಿಂಗಳಿನಿಂದ ಕೋವಿಡ್-19 ರೋಗ ಮುಕ್ತವಾಗಿದ್ದ ಗೋವಾದಲ್ಲಿ ಗುರುವಾರ 8 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಹಡಗಿನಲ್ಲಿದ್ದ ಸಿಬ್ಬಂದಿಯೊಬ್ಬರು ಇದ್ದಾರೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.ಒಂದೇ ಕುಟುಂಬದ 5 ಮಂದಿಗೆ ಸೋಂಕು ದೃಢಪಟ್ಟಿದ್ದು, 1 ವರ್ಷದ ಮಗುವಿಗೂ ಸೋಂಕು ತಗುಲಿದೆ ಎಂದು ಸಚಿವರು ಹೇಳಿದ್ದಾರೆ.

ಮುಂಬೈಯ ಧಾರಾವಿಯಲ್ಲಿ ಇಂದು 33 ಹೊಸ ಪ್ರಕರಣಗಳು ವರದಿಯಾಗಿವೆ. ಇಬ್ಬರು ಸಾವಿಗೀಡಾಗಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 1061ಕ್ಕೇರಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಹೇಳಿದೆ.

ಚಂಡೀಗಢದಲ್ಲಿ 2 ಹೊಸ ಪ್ರಕರಣ ಪತ್ತೆಯಾಗಿದ್ದು ಪ್ರಕರಣಗಳ ಸಂಖ್ಯೆ 191ಕ್ಕೇರಿದೆ. 3 ಮಂದಿ ಸಾವಿಗೀಡಾಗಿದ್ದರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜಸ್ಥಾನದಲ್ಲಿ 24 ಹೊಸ ಪ್ರಕರಣಗಳು ದಾಖಲಾಗಿದ್ದು ಸೋಂಕು ದೃಢಪಟ್ಟವರ ಸಂಖ್ಯೆ4418 ಆಗಿದೆ. ಇಲ್ಲಿಯವರೆಗೆ 112 ಮಂದಿ ಸಾವಿಗೀಡಾಗಿದ್ದಾರೆ. 2346 ಮಂದಿ ಈವರೆಗೆ ಚೇತರಿಸಿಕೊಂಡಿದ್ದಾರೆ.

ಉತ್ತರಾಖಂಡಲ್ಲಿ 3 ಪ್ರಕರಣಗಳು ಪತ್ತೆಯಾಗಿದ್ದು ಪ್ರಕರಣಗಳ ಸಂಖ್ಯೆ 75 ಕ್ಕೇರಿದೆ. 24 ಮಂದಿಗೆ ರೋಗ ದೃಢಪಟ್ಟಿದ್ದು 50 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಸಾವಿಗೀಡಾಗಿದ್ದಾರೆ.

ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 472 ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳ ಸಂಖ್ಯೆ 8470ಕ್ಕೇರಿದೆ. ಇವತ್ತು ಯಾವುದೇ ಸಾವು ಸಂಭವಿಸಿಲ್ಲ.

ಕೇರಳದಲ್ಲಿ ಇಂದು 26 ಹೊಸ ಪ್ರಕರಣಗಳು ವರದಿಯಾಗಿವೆ. ಕಾಸರಗೋಡು-10, ಮಲಪ್ಪುರಂ-5, ಪಾಲಕ್ಕಾಡ್, ವಯನಾಡ್- 3, ಕಣ್ಣೂರ್- 2, ಪತ್ತನಂತಿಟ್ಟ , ಇಡುಕ್ಕಿ ಮತ್ತು ಕೋಯಿಕ್ಕೋಡ್‌ನಲ್ಲಿ ಒಂದು ಪ್ರಕರಣ ವರದಿ ಆಗಿದೆ. ಪ್ರಸ್ತುತ 64 ರೋಗಿಗಳು ಚಿಕಿತ್ಸೆಯಲ್ಲಿದ್ದಾರೆ .

ಗುಜರಾತ್‌ನಲ್ಲಿ 9,265ಪ್ರಕರಣಗಳು ಪತ್ತೆಯಾಗಿದ್ದು, 561 ಮಂದಿ ಮೃತಪಟ್ಟಿದ್ದಾರೆ.

ತಮಿಳುನಾಡಿನಲ್ಲಿ 9,463 ಮಂದಿಗೆ ಕೋವಿಡ್‌ ಸೋಂಕು ತಗುಲಿದ್ದು, 69 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT