ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಉಪಗ್ರಹ ‘ಮೈಕ್ರೋಸ್ಯಾಟ್‌–ಆರ್‌’ ಯಶಸ್ವಿ ಉಡಾವಣೆ

Last Updated 25 ಜನವರಿ 2019, 1:04 IST
ಅಕ್ಷರ ಗಾತ್ರ

ಶ್ರೀಹರಿಕೋಟಾ: ಇಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಸೇನಾ ಉಪಗ್ರಹ ‘ಮೈಕ್ರೋಸ್ಯಾಟ್‌–ಆರ್‌’ ಅನ್ನು ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ಇಸ್ರೊದ 44 ಮೀಟರ್‌ ಉದ್ದದ ‘ಪಿಎಸ್‌ಎಸ್‌ವಿ– ಸಿ44’ ಉಡಾವಣಾ ವಾಹಕ ಗುರುವಾರ ರಾತ್ರಿ 11.37ಕ್ಕೆ ಈ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು. ‘ಮೈಕ್ರೋಸ್ಯಾಟ್‌–ಆರ್‌’740 ಕೆ.ಜಿ. ತೂಕವಿರುವ ಈ ಉಪಗ್ರಹ ಸೇನೆಗಾಗಿಯೇ ಬಳಸಲು ಉದ್ದೇಶಿಸಿದೆ.ಇಸ್ರೊಈ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ.

‘ಮೈಕ್ರೋಸ್ಯಾಟ್‌–ಆರ್‌’ ಜತೆಯಲ್ಲಿ ‘ಕಲಾಂಸ್ಯಾಟ್‌’ ಉಪಗ್ರಹವನ್ನು ಸಹ ಉಡಾಯಿಸಲಾಗಿತ್ತು. ₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಈ ಉಪಗ್ರಹವನ್ನು ನ್ಯಾನೊ ಉಪಗ್ರಹಗಳ ಸಂಪರ್ಕ ವ್ಯವಸ್ಥೆಯ ಅಧ್ಯಯನಕ್ಕೆ ಪ್ರಾಯೋಗಿಕವಾಗಿ ಬಳಸಲು ಉದ್ದೇಶಿಸಲಾಗಿದೆ. ಈ ಉಪಗ್ರಹದಿಂದ ವಿಪತ್ತು ನಿರ್ವಹಣೆ ಸಹಕಾರಿಯಾಗಲಿದೆ ಎಂದು ವಿಜ್ಞಾನಿಗಳುತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT