4
ಸಮೀಕ್ಷಾ ವರದಿಗೆ ಆಕ್ಷೇಪ

ಮಹಿಳೆಯರಿಗೆ ಭಾರತ ಅಪಾಯಕಾರಿ: ವರದಿ ತಿರಸ್ಕರಿಸಿದ ಮಹಿಳಾ ಆಯೋಗ

Published:
Updated:

ನವದೆಹಲಿ: ‘ಮಹಿಳೆಯರಿಗೆ ಭಾರತ ಹೆಚ್ಚು ಅಪಾಯಕಾರಿ ದೇಶ’ ಎಂಬ ಥಾಮ್ಸನ್ ರಾಯಿಟರ್ಸ್ ಪ್ರತಿಷ್ಠಾನದ ಸಮೀಕ್ಷಾ ವರದಿಯನ್ನು ರಾಷ್ಟ್ರೀಯ ಮಹಿಳಾ ಆಯೋಗ ಅಲ್ಲಗಳೆದಿದೆ.

‘ಸಮೀಕ್ಷೆಯಲ್ಲಿ ಕಡಿಮೆ ಸಂಖ್ಯೆಯ ಜನರಷ್ಟೇ ಭಾಗವಹಿಸಿದ್ದಾರೆ. ಭಾರತದಲ್ಲಿನ ಮಹಿಳೆಯರಿಗೆ ತಿಳಿವಳಿಕೆ ಇದೆ. ಹೀಗಾಗಿ ಅಪಾಯಕಾರಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿ ಇರಲು ಸಾಧ್ಯವೇ ಇಲ್ಲ. ಭಾರತದ ನಂತರದ ಸ್ಥಾನದಲ್ಲಿರುವ ದೇಶಗಳಲ್ಲಿ ಮಹಿಳೆಯರು ಮುಕ್ತವಾಗಿ ಮಾತನಾಡುವ ಸ್ಥಿತಿಯೂ ಇಲ್ಲ’ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ವರದಿಯಲ್ಲೇನಿತ್ತು?: ಮಾನವ ಕಳ್ಳಸಾಗಣೆ, ಬಲವಂತದ ಮದುವೆ ಮತ್ತು ಕೆಲಸ ಹಾಗೂ ಲೈಂಗಿಕ ದಾಸ್ಯದ ವಿಚಾರದಲ್ಲಿ ಮಹಿಳೆಯರಿಗೆ ಭಾರತವು ವಿಶ್ವದಲೇ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದು ಪ್ರತಿಷ್ಠಾನದ ವರದಿಯಲ್ಲಿ ಹೇಳಲಾಗಿತ್ತು.

ಮಹಿಳೆಯರಿಗೆ ಅಪಾಯಕಾರಿಯಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಲಿಬಿಯಾ ಮತ್ತು ಮ್ಯಾನ್ಮಾರ್‌ಗಳನ್ನು ಹೆಸರಿಸಲಾಗಿತ್ತು. ನೈಜೀರಿಯಾ ಮತ್ತು ರಷ್ಯಾಗಳು ಜಂಟಿಯಾಗಿ ನಾಲ್ಕನೇ ಸ್ಥಾನದಲ್ಲಿವೆ.

ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ಜಾಗತಿಕ ಮಟ್ಟದಲ್ಲಿ ದುಡಿಯುತ್ತಿರುವ 550 ಪರಿಣತರ ಮತವನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು.

2011ರಲ್ಲಿ ನಡೆದಿದ್ದ ಸಮೀಕ್ಷೆಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿತ್ತು. ಈಗ ಮೊದಲನೇ ಸ್ಥಾನ ತಲುಪಿರುವುದಕ್ಕೆ ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !