ನೀತಿ ಆಯೋಗದ ಮುಂದೆ ‘7ಸಿ’ ಅಭಿವೃದ್ಧಿ ಮಂತ್ರ ಪಠಿಸಿದ ಮೋದಿ

7

ನೀತಿ ಆಯೋಗದ ಮುಂದೆ ‘7ಸಿ’ ಅಭಿವೃದ್ಧಿ ಮಂತ್ರ ಪಠಿಸಿದ ಮೋದಿ

Published:
Updated:

ನವದೆಹಲಿ: ಭಾರತ ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯಲ್ಲಿ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ. 

ಭಾರತ ಮುಂದೆ ಸಾಗುತ್ತಿದೆ. ನಮ್ಮ ಆರ್ಥಿಕತೆಯು ಮುಂದುವರೆಯುತ್ತಿದೆ. ನಮ್ಮದು ಪ್ರಾಪಂಚಿಕವಾಗಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದಿದ ಆರ್ಥಿಕತೆ ಎಂದು ಮೋದಿ ನೀತಿ ಆಯೋಗದ ಎದುರು ಹೇಳಿಕೊಂಡಿದ್ದಾರೆ. 

ಇದೇ ವೇಳೆ ಮೋದಿ ಅವರು ಸಾಮಾನ್ಯ (Common), ಸಂಪರ್ಕ(Connected), ಅನುಕೂಲತೆ (Convenient), ದಟ್ಟಣೆ ಮುಕ್ತ (Congestion-free), ಹೊರೆ (Charged), ಸ್ಚಚ್ಛತೆ (Clean), ಹೊಸತನ (Cutting-edge) ಎಂಬ  ’7 ಸಿ ’ಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. 

ಇನ್ನು ನಮ್ಮ ದೇಶದ ಯುವಪೀಳಿಗೆ ಕಾರ್ಯಪ್ರವೃತ್ತವಾಗುತ್ತಿದೆ. ಭಾರತ ಅತೀ ಉತ್ಸಾಹ, ಅವಸರ ಹಾಗೂ ಒಂದು ಉತ್ತಮ ಉದ್ದೇಶದೊಂದಿಗೆ ಮುನ್ನಡೆಯುತ್ತಿದೆ. ನಮ್ಮ ನಗರಗಳು, ಪಟ್ಟಣಗಳು ಬೆಳೆದಿವೆ. ನಾವು 100 ಸ್ಮಾರ್ಟ್‌ ಸಿಟಿಗಳನ್ನು ನಿರ್ಮಾಣ ಮಾಡಿದ್ದೇವೆ. ಭಾರತ ಉದ್ಯಮ, ಉದ್ಯಮಿಗಳಿಗೆ ಉತ್ತಮ ಸ್ಥಳ ಎಂದು ಬಿಂಬಿಸಿದ್ದೇವೆ ಎಂದು ವಿವರಿಸಿದ್ದಾರೆ. 

ಚಲನಶೀಲತೆಯ ಬಗ್ಗೆ ಮಾತನಾಡಿದ ಮೋದಿ, ಚಲನಶೀಲತೆ ಎನ್ನುವುದು ಆರ್ಥಿಕತೆಯ ಪ್ರಮುಖ ಅಂಶ. ಇದು ಪ್ರಯಾಣ ಹಾಗೂ ಸಾರಿಗೆಯ ಹೊರೆಯನ್ನು ತಗ್ಗಿಸುತ್ತದೆ. ಆರ್ಥಿಕತೆಯ ಉತ್ತೇಜನಕ್ಕೆ ಪೂರಕವಾಗುತ್ತದೆ. ಈಗಾಗಲೇ ಇದು ಮುಖ್ಯ ಉದ್ಯೋಗಿಯಾಗಿದೆ. ಇನ್ನು ಮುಂದಿನ ಪೀಳಿಗೆಗೆ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತಿದೆ ಎಂದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !