ಮಂಗಳವಾರ, ಜೂನ್ 2, 2020
27 °C

ಕಂಪನಿಗಳ ಆಡಳಿತ ಮಂಡಳಿಯಲ್ಲಿ ಮಹಿಳೆ: ಭಾರತಕ್ಕೆ 12ನೇ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಮುಂಬೈ : ಕಂಪನಿಗಳ ಆಡಳಿತ ಮಂಡಳಿಯಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು 12ನೇ ಸ್ಥಾನ ಪಡೆದಿದೆ. ಜಾಗತಿಕವಾಗಿ ಈ ಬೆಳವಣಿಗೆ ಏರುಗತಿಯಲ್ಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಸರ್ಕಾರಿ- ನೌಕರಿ.ಕಾಂ ಮತ್ತು ಮೈಹೈರ್‌ಕ್ಲಬ್‌.ಕಾಂ ನಡೆಸಿದ ‘ವಿಮೆನ್ ಆನ್‌ ಬೋರ್ಡ್‌ 2020’ ಅಧ್ಯಯನ ವರದಿಯಲ್ಲಿ ಈ ಮಾಹಿತಿ ಇದೆ. ಈ ಎರಡೂ ಸೇವಾತಾಣಗಳಲ್ಲಿ ಪಟ್ಟಿ ಮಾಡಲಾಗಿರುವ 7,824 ಕಂಪನಿಗಳ ಮೇಲೆ ಅಧ್ಯಯನ ನಡೆಸಿ, ಈ ವರದಿ ಸಿದ್ಧಪಡಿಸಲಾಗಿದೆ. ಭಾರತದ 628 ಕಂಪನಿಗಳು ಈ ಪಟ್ಟಿಯಲ್ಲಿದ್ದವು.

ಭಾರತದ 628 ಕಂಪನಿಗಳ ಪೈಕಿ ಶೇ 55ರಷ್ಟು ಕಂಪನಿಗಳ ಆಡಿತ ಮಂಡಳಿಗಳು ಮಹಿಳಾ ನಿರ್ದೇಶಕರನ್ನು ಹೊಂದಿವೆ. ಇದರಲ್ಲಿ ಶೇ 29ರಷ್ಟು ಆಡಳಿತ ಮಂಡಳಿಗಳು ಇಬ್ಬರು ಮಹಿಳಾ ನಿರ್ದೇಶಕರನ್ನು ಹೊಂದಿವೆ. 

ಭಾರತದ ಕಂಪನಿಗಳ ಆಡಳಿತ ಮಂಡಳಿಯಲ್ಲಿ ಪುರುಷ ನಿರ್ದೇಶಕರ ಅಧಿಕಾರಾವದಿ 3 ವರ್ಷದಷ್ಟಿದೆ. ಆದರೆ, ಮಹಿಳಾ ನಿರ್ದೇಶಕರ ಅಧಿಕಾರವಧಿ 1 ವರ್ಷಕ್ಕಿಂತ ಕಡಿಮೆ. ಈ ಕಂಪನಿಗಳ ಎಲ್ಲಾ ವರ್ಗದ ನೌಕರರಲ್ಲಿ ಮಹಿಳೆಯರ ಪ್ರಮಾಣ ಶೇ 39ರಷ್ಟಿದೆ. ಆದರೆ, ಇದರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಉನ್ನತ ಹುದ್ದೆಗಳಿಗೆ ಹೋಗುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು