ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು ಉತ್ತೇಜನ ಭಾರತಕ್ಕೆ ಹಿನ್ನಡೆ

Last Updated 1 ನವೆಂಬರ್ 2019, 19:42 IST
ಅಕ್ಷರ ಗಾತ್ರ

ನವದೆಹಲಿ : ಭಾರತದ ರಫ್ತು ಉತ್ತೇಜನಾ ಕ್ರಮಗಳ ವಿರುದ್ಧ ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ಅಮೆರಿಕ ನೀಡಿದ್ದ ದೂರಿನಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ.

ಅಂತರರಾಷ್ಟ್ರೀಯ ವ್ಯಾಪಾರ ನಿಯಮಗಳಿಗೆ ಈ ರಫ್ತು ಉತ್ತೇಜನಾ ಯೋಜನೆಗಳು ವಿರುದ್ಧವಾಗಿವೆ ಎಂದು ‘ಡಬ್ಲ್ಯುಟಿಒ’ದ ವಿವಾದ ಇತ್ಯರ್ಥ ಸಮಿತಿಯು ಅಭಿಪ್ರಾಯಪಟ್ಟಿದೆ.

ಈ ತೀರ್ಪಿನ ಹಿನ್ನೆಲೆಯಲ್ಲಿ, ಭಾರತ ತನ್ನ ಈ ಉತ್ತೇಜನಾ ಕ್ರಮಗಳನ್ನು ಪರಾಮರ್ಶಿಸಬೇಕಾಗಿದೆ. ಇನ್ನು ಮುಂದೆ ರಫ್ತು ಸಾಧನೆ ಆಧರಿಸಿ ಸಬ್ಸಿಡಿಯನ್ನೂ ನೀಡುವಂತಿಲ್ಲ.

ಮೇಲ್ಮನವಿ ಮಂಡಳಿಗೆ ದೂರು: ಈ ತೀರ್ಪಿನ ವಿರುದ್ಧ ಭಾರತವು ‘ಡಬ್ಲ್ಯುಟಿಒ’ದ ವಿವಾದ ಇತ್ಯರ್ಥದ ಮೇಲ್ಮನವಿ ಮಂಡಳಿಗೆ ದೂರು ಸಲ್ಲಿಸಲು ಅವಕಾಶವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT