ಅಗ್ನಿ–5 ಕ್ಷಿಪಣಿ ಯಶಸ್ವಿ ಪರೀಕ್ಷೆ

7

ಅಗ್ನಿ–5 ಕ್ಷಿಪಣಿ ಯಶಸ್ವಿ ಪರೀಕ್ಷೆ

Published:
Updated:

ಬಾಲೇಶ್ವರ, ಒಡಿಶಾ: ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯದ ಅಗ್ನಿ–5 ಕ್ಷಿಪಣಿಯನ್ನು ಒಡಿಶಾ ಕರಾವಳಿಯ ಡಾ. ಅಬ್ದುಲ್ ಕಲಾಂ ದ್ವೀಪದಲ್ಲಿ ಸೋಮವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು. 

ಸ್ವದೇಶಿ ನಿರ್ಮಿತ ಕ್ಷಿಪಣಿಯು 5 ಸಾವಿರ ಕಿ.ಮೀ ದಾಳಿ ವ್ಯಾಪ್ತಿ ಹೊಂದಿದ್ದು, ಈ ಬಾರಿಯದ್ದು ಏಳನೇ ಪ್ರಾಯೋಗಿಕ ಪರೀಕ್ಷೆಯಾಗಿದೆ.

ಕ್ಷಿಪಣಿಯ ಎತ್ತರ 17 ಮೀಟರ್, ಅಗಲ 2 ಮೀಟರ್. 1.5 ಟನ್ ತೂಕದ ಪರಮಾಣು ಸಿಡಿತಲೆ ಹೊರುವ ಸಾಮರ್ಥ್ಯವಿದೆ. ಉಳಿದ ಕ್ಷಿಪಣಿಗಳಿಗೆ ಹೋಲಿಸಿದರೆ ಅತ್ಯಾಧುನಿಕ ಸೌಲಭ್ಯಗಳನ್ನು ಇದು ಹೊಂದಿದೆ. 

ಭಾರತದ ಬತ್ತಳಿಕೆಯಲ್ಲಿ 700 ಕಿ.ಮೀ ದಾಳಿ ವ್ಯಾಪ್ತಿಯ ಅಗ್ನಿ–1 ಕ್ಷಿಪಣಿ; 2000 ಕಿ.ಮೀ.ನ ಅಗ್ನಿ–2; 2500 ಕಿ.ಮೀ. ದಾಳಿ ವ್ಯಾಪ್ತಿಯ ಅಗ್ನಿ 3 ಹಾಗೂ 4 ಕ್ಷಿಪಣಿಗಳಿವೆ. 

Tags: 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !