ಮಂಗಳವಾರ, ಜೂನ್ 2, 2020
27 °C

ಕೊರೊನಾ ಲಾಕ್‌ಡೌನ್ ವೇಳೆ ಹೀಗೆ ಕಾಣಿಸುತ್ತಿದೆ ಭಾರತ: ಚಿತ್ರಗಳಲ್ಲಿ ನೋಡಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

West Bengal

ಕೊರೊನಾ ವೈರಸ್ ಸೋಂಕು (ಕೋವಿಡ್–19) ಹರಡದಂತೆ ತಡೆಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ಲಾಕ್‌ಡೌನ್‌ಗೆ ಕರೆ ನೀಡಿ ಆರು ದಿನಗಳು ಕಳೆದಿವೆ. ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಂಡುಬಂದ ಲಾಕ್‌ಡೌನ್ ಚಿತ್ರಗಳು ಇಲ್ಲಿವೆ.

ನವದೆಹಲಿಯ ಕಿರಾಣಿ ಅಂಗಡಿಯೊಂದರ ಮುಂದೆ ಉಚಿತ ಆಹಾರ ಧಾನ್ಯಗಳನ್ನು ಪಡೆಯಲು ಸರದಿ ಸಾಲಿನಲ್ಲಿ ನಿಂತವರ ಮಧ್ಯೆ ಹಸುವೊಂದು ಹಾದುಹೋಗುತ್ತಿರುವುದು (ರಾಯಿಟರ್ಸ್‌ ಚಿತ್ರ).

ನವದೆಹಲಿಯ ನಿರಾಶ್ರಿತರ ಶಿಬಿರವೊಂದರಲ್ಲಿ ನಿರ್ಗತಿಕರು ವಿಶ್ರಾಂತಿ ಪಡೆಯುತ್ತಿರುವುದು (ಎಎಫ್‌ಪಿ ಚಿತ್ರ).

ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸಿಬ್ಬಂದಿ ನವದೆಹಲಿಯಲ್ಲಿ ನಿರಾಶ್ರಿತರಿಗೆ ಆಹಾರ ವಿತರಿಸಿದರು (ಎಎಫ್‌ಪಿ ಚಿತ್ರ).

ನವದೆಹಲಿಯಲ್ಲಿ ಆಹಾರಕ್ಕಾಗಿ ಕಾಯುತ್ತಿರುವ ನಿರ್ಗತಿಕರು (ರಾಯಿಟರ್ಸ್ ಚಿತ್ರ).

ನವೀ ಮುಂಬೈನ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳಲು ಜನರು ಸರದಿ ಸಾಲಿನಲ್ಲಿ ನಿಂತಿರುವುದು (ಪಿಟಿಐ ಚಿತ್ರ).

ಲಾಕ್‌ಡೌನ್ ಪರಿಣಾಮ ಮಾರಾಟ ಮಾಡಲು ಮತ್ತು ಸಂಗ್ರಹಿಸಿ ಇಡಲು ಸಾಧ್ಯವಾಗದ ಹಾಲನ್ನು ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಫುಲಿಯಾ ಎಂಬಲ್ಲಿ ಹೈನುಗಾರರು ರಸ್ತೆಗೆ ಚೆಲ್ಲಿದರು (ಪಿಟಿಐ ಚಿತ್ರ).

ಬಿಹಾರದ ಪಟ್ನಾದಲ್ಲಿ ಬಡವರಿಗೆ ಸ್ವಯಂಸೇವಕರು ಉಚಿತವಾಗಿ ಆಹಾರ ವಿತರಣೆ ಮಾಡಿದರು (ಪಿಟಿಐ ಚಿತ್ರ).

ಮುಂಬೈನ ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ (ಸೋಷಿಯಲ್ ಡಿಸ್ಟೆನ್ಸಿಂಗ್) ಕಾಯ್ದುಕೊಳ್ಳುತ್ತಿರುವ ಗ್ರಾಹಕರು (ಎಎಫ್‌ಪಿ ಚಿತ್ರ).

ಕೋವಿಡ್–19 ಸೋಂಕು ಬಹುತೇಕ ಯುವಜನರಲ್ಲಿ ಕಡಿಮೆ ರೋಗ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ ಎನ್ನಲಾಗುತ್ತಿದೆ. ಆದರೆ, ಈಗಾಗಲೇ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಮತ್ತು ವೃದ್ಧರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ವೃದ್ಧರೊಬ್ಬರು ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್‌ ಧರಿಸಿರುವುದು (ಎಪಿ ಚಿತ್ರ).

ಗುವಾಹಟಿಯಲ್ಲಿ ವ್ಯಕ್ತಿಯೊಬ್ಬರು ಪ್ರಾಣಿಗಳಿಗೆ ಆಹಾರ ನೀಡುತ್ತಿರುವುದು (ಪಿಟಿಐ ಚಿತ್ರ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು