ಗುರುವಾರ , ಜುಲೈ 16, 2020
24 °C
ಫ್ರಾನ್ಸ್ ರಾಯಭಾರಿ ಇಮ್ಯಾನುಯೆಲ್ ಲೆನೈನ್ ಅಭಿಪ್ರಾಯ

ಕೊರೊನಾ ಲಸಿಕೆ ತಯಾರಿಕೆಯಲ್ಲಿ ಭಾರತ ಪಾತ್ರ ಮುಖ್ಯ: ಫ್ರಾನ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಕೋವಿಡ್‌–19ಕ್ಕೆ ಚಿಕಿತ್ಸೆ ಕಂಡುಹಿಡಿದ ಬಳಿಕ, ಕೊರೊನಾ ವೈರಸ್ ವಿರುದ್ಧ ಲಸಿಕೆ ಮತ್ತು ಔಷಧಿಗಳನ್ನು ಸಾಮೂಹಿಕವಾಗಿ ತಯಾರಿಸುವಲ್ಲಿ ಭಾರತದ ಪಾತ್ರ ಮುಖ್ಯವಾದದ್ದು’ ಎಂದು ಫ್ರಾನ್ಸ್ ರಾಯಬಾರಿ ಇಮ್ಯಾನುಯೆಲ್ ಲೆನೈನ್ ಹೇಳಿದ್ದಾರೆ. 

‘ವಿಶ್ವದಾದ್ಯಂತ ಕೋವಿಡ್‌–19 ಲಸಿಕೆ ಅಥವಾ ಔಷಧಿಗಳನ್ನು ಸಮಾನವಾಗಿ ವಿತರಿಸಬೇಕು ಎಂದಾದಲ್ಲಿ ರಾಷ್ಟ್ರಗಳ ನಡುವೆ ಸಮನ್ವಯ ಸಾಧಿಸುವುದು ಮುಖ್ಯ. ಔಷಧಿ ಮತ್ತು ಲಸಿಕೆಗಳ ಉತ್ಪಾದಕ ರಾಷ್ಟ್ರವಾಗಿ ಈ ನಿಟ್ಟಿನಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. 

‘ಕೋವಿಡ್‌–19ಗಾಗಿ ಸಂಶೋಧನೆ ಮಾಡಲಾಗುವ ಲಸಿಕೆ, ಔಷಧಿ ಸೇರಿದಂತೆ ಎಲ್ಲ ಬಗೆಯ ವೈದ್ಯಕೀಯ ಸೇವೆ ವಿಶ್ವದ ಎಲ್ಲರಿಗೂ ಲಭ್ಯವಾಗಬೇಕು. ಇದು ಪಾರದರ್ಶಕ ಹಾಗೂ ಮುಕ್ತವಾಗಿರಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಕೈಗೊಂಡಿರುವ ನಿರ್ಣಯಕ್ಕೆ ಭಾರತ ಮತ್ತು ಫ್ರಾನ್ಸ್‌ ಬೆಂಬಲಿಸಿವೆ’ ಎಂದು ಅವರು ಹೇಳಿದ್ದಾರೆ. 

ಜಾಗತಿಕ ಮಟ್ಟದಲ್ಲಿ ಲಸಿಕೆ ಮತ್ತು ಜೆನರಿಕ್ ಔಷಧಿಗಳನ್ನು ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತವು ಪ್ರಮುಖ ರಾಷ್ಟ್ರವಾಗಿದೆ. ಕೊರೊನಾ ವೈರಸ್‌ಗೆ ಲಸಿಕೆ ಕಂಡುಹಿಡಿಯಲು ಭಾರತದ ಹಲವು ಸಂಶೋಧನಾ ಸಂಸ್ಥೆಗಳು ಪ್ರತ್ಯೇಕವಾಗಿ ಕಾರ್ಯನಿರತವಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು