ಬೀಫ್‌ ರಫ್ತು: ಮೂರನೇ ಸ್ಥಾನದಲ್ಲಿ ಭಾರತ

7

ಬೀಫ್‌ ರಫ್ತು: ಮೂರನೇ ಸ್ಥಾನದಲ್ಲಿ ಭಾರತ

Published:
Updated:

ನವದೆಹಲಿ: ಭಾರತವು ಹೆಚ್ಚಿನ ಪ್ರಮಾಣದಲ್ಲಿ ಬೀಫ್‌ ರಫ್ತು ಮಾಡುವ ವಿಶ್ವದ ಮೂರನೇ ರಾಷ್ಟ್ರವಾಗಿದ್ದು, ಇನ್ನೂ ಒಂದು ದಶಕ ಕಾಲ ಇದೇ ಸ್ಥಾನದಲ್ಲಿ ಮುಂದುವರಿಯಲಿದೆ ಎಂದು ವಿಶ್ವಸಂಸ್ಥೆಯ ಆಹಾರ(ಎಫ್‌ಸಿಒ) ಮತ್ತು ಕೃಷಿ ಸಂಘಟನೆ(ಎಫ್‌ಸಿಒ) ಹಾಗೂ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ(ಒಇಸಿಡಿ) ವರದಿ ಪ್ರಕಟಿಸಿವೆ.

2017–2027ರ ವರೆಗಿನ ಮುನ್ನೋಟ ಕುರಿತ ವರದಿಯನ್ನು ಈ ಸಂಸ್ಥೆಗಳು ಪ್ರಕಟಿಸಿದೆ. ವರದಿ ಪ್ರಕಾರ ಬ್ರೆಜಿಲ್‌ ಹಾಗೂ ಆಸ್ಪ್ರೇಲಿಯಾ ದೇಶಗಳು ಮೊದಲೆರಡು ಸ್ಥಾನದಲ್ಲಿವೆ.

‘ಕಳೆದ ವರ್ಷ 15.6 ಲಕ್ಷ ಟನ್‌ನಷ್ಟು ಬೀಫ್‌ ರಫ್ತು ಮಾಡಿರುವ ಭಾರತ, ಮುಂದಿನ ಒಂದು ದಶಕದವರೆಗೆ ಮೂರನೇ ಸ್ಥಾನದಲ್ಲೇ ಇರಲಿದೆ. ಜೊತೆಗೆ 2026ರ ವೇಳೆಗೆ ಬೀಫ್‌ ರಫ್ತು ಸಾಮರ್ಥ್ಯವನ್ನು 19.3 ಲಕ್ಷ ಟನ್‌ಗೆ ಹೆಚ್ಚಿಸಿಕೊಳ್ಳಲಿದ್ದು, ಈ ಪ್ರಮಾಣವು ವಿಶ್ವದ ಬೀಫ್‌ ರಫ್ತಿನ ಶೇ. 16ರಷ್ಟು ಆಗಲಿದೆ’ ಎಂದು ವರದಿಯು ಉಲ್ಲೇಖಿಸಿದೆ.

ಆದಾಗ್ಯೂ ವರದಿಯಲ್ಲಿ ದನದ ಮಾಂಸವೇ ಅಥವಾ ಕೋಣದ್ದೇ ಎಂಬುದನ್ನು ತಿಳಿಸಿಲ್ಲ. ಆದರೆ ಭಾರತದಿಂದ ಮ್ಯಾನ್ಮಾರ್‌ಗೆ ರಫ್ತಾಗಿರುವ ಮಾಂಸವು ಕೋಣದ್ದು ಎನ್ನಲಾಗಿದೆ. ಒಇಸಿಡಿ ವರದಿ ಪ್ರಕಾರ, ಕಳೆದ ವರ್ಷ ಭಾರತ 3.63 ಲಕ್ಷ ಟನ್‌ನಷ್ಟು ಮಾಂಸವನ್ನು ಆಮದು ಮಾಡಿಕೊಂಡಿದೆ.

2016ರಲ್ಲಿ ವಿಶ್ವದ ಒಟ್ಟು ಬೀಫ್‌ ರಫ್ತು ಪ್ರಮಾಣ 1.95 ಕೋಟಿ ಟನ್‌ನಷ್ಟಾಗಿತ್ತು. ಈ ಪ್ರಮಾಣ 2026ರ ವೇಳೆಗೆ 1.24 ಕೋಟಿ ಟನ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಫ್‌ಸಿಒ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 15

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !