ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಒಸಿಯಲ್ಲಿ ಇಸ್ರೇಲ್‌ ಕ್ಷಿಪಣಿ

ಟ್ಯಾಂಕ್‌, ಬಂಕರ್‌ಗಳನ್ನು ನಾಶಪಡಿಸುವ ಸಾಮರ್ಥ್ಯ
Last Updated 26 ನವೆಂಬರ್ 2019, 19:46 IST
ಅಕ್ಷರ ಗಾತ್ರ

ಜಮ್ಮು, ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಭಾರತೀಯ ಸೇನೆಯು ಇಸ್ರೇಲ್‌ ನಿರ್ಮಿತ ಕ್ಷಿಪಣಿಗಳನ್ನು (ಎಟಿಜಿಎಂಎಸ್‌) ನಿಯೋಜಿಸಿದೆ.

ಟ್ಯಾಂಕ್‌ ಮತ್ತು ಬಂಕರ್‌ಗಳನ್ನು ಧ್ವಂಸಮಾಡುವ ಸಾಮರ್ಥ್ಯವುಳ್ಳ ಈ ಕ್ಷಿಪಣಿಗಳನ್ನು ಅಕ್ಟೋಬರ್‌ 16 ಮತ್ತು 17ರಂದೇ ನಿಯೋಜಿಸಲಾಗಿದೆ. ₹ 280 ಕೋಟಿ ಮೌಲ್ಯದ 12 ಲಾಂಚರ್‌, 210 ಕ್ಷಿಪಣಿಗಳನ್ನು ಇಸ್ರೇಲ್ ಭಾರತೀಯ ಸೇನೆಗೆ ಹಸ್ತಾಂತರಿಸಿತ್ತು.

ಇಸ್ರೇಲ್‌ನ ರಫೇಲ್‌ ಅಡ್ವಾನ್ಸ್‌ಡ್‌ ಡಿಫೆನ್ಸ್‌ಸಿಸ್ಟಮ್ಸ್‌ ಸ್ಪೈಕ್‌ ಕ್ಷಿಪಣಿಗಳನ್ನು ತಯಾರಿಸಿ ಸುತ್ತಿದೆ.
ಭಾರತದಲ್ಲಿ ಕಲ್ಯಾಣಿ ಗ್ರೂಪ್‌ ಮತ್ತು ರಫೇಲ್‌ ಅಡ್ವಾನ್ಸ್ಡಸ್‌ ಡಿಫೆನ್ಸ್‌ ಸಿಸ್ಟಮ್ಸ್‌ ₹70 ಕೋಟಿ ವೆಚ್ಚದಲ್ಲಿ ಇದೇ ವರ್ಷದ ಆಗಸ್ಟ್‌ನಲ್ಲಿ ಈ ಕ್ಷಿಪಣಿಗಳನ್ನು ತಯಾರಿಸಲು ಆರಂಭಿಸಿವೆ.

ಕಲ್ಯಾಣಿ ರಫೇಲ್‌ ಅಡ್ವಾನ್ಸಡ್‌ ಸಿಸ್ಟಮ್ಸ್‌ ಜಂಟಿ ಸಹಭಾಗಿತ್ವದಲ್ಲಿ ಕಲ್ಯಾಣಿ ಗ್ರೂಪ್‌ ಶೇ 51
ರಷ್ಟು ಪಾಲು ಹೊಂದಿದೆ. ದೇಶದಲ್ಲಿ ಇಂತಹ ಶಸ್ತ್ರಾಸ್ತ್ರ ತಯಾರಿಸುತ್ತಿರುವ ಮೊದಲ ಖಾಸಗಿ ಕಂಪನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT