ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ವರ್ಷದ ಭಾರತದ ‘ಆ್ಯಪ್‌‘ ಹುಡುಗ; ದುಬೈನಲ್ಲಿ ಸಾಫ್ಟ್‌ವೇರ್‌ ಕಂಪನಿ ಒಡೆಯ!

9ನೇ ವಯಸ್ಸಿನಲ್ಲಿ ಮೊದಲ ಅಪ್ಲಿಕೇಶನ್
Last Updated 17 ಡಿಸೆಂಬರ್ 2018, 11:59 IST
ಅಕ್ಷರ ಗಾತ್ರ

ದುಬೈ: ನಾಲ್ಕು ವರ್ಷಗಳ ಹಿಂದೆ ತನ್ನ ಮೊದಲ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿ ಪಡಿಸಿದ ಭಾರತೀಯ ಮೂಲದ 13 ವರ್ಷ ವಯಸ್ಸಿನ ಹುಡುಗ, ಈಗ ದುಬೈನಲ್ಲಿ ಸ್ವಂತ ಸಾಫ್ಟವೇರ್‌ ಅಭಿವೃದ್ಧಿ ಪಡಿಸುವ ಸಂಸ್ಥೆಯನ್ನು ಹೊಂದಿದ್ದಾರೆ.

ಕೇರಳದ ಆದಿತ್ಯನ್ ರಾಜೇಶ್‌, ಮೊಟ್ಟ ಮೊದಲ ಬಾರಿಗೆ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿ ಪಡಿಸಿದಾಗ ಆತನ ವಯಸ್ಸು ಕೇವಲ 9 ವರ್ಷ. ಬೇಸರ ಕಳೆಯಲು ಮಾಡಿಕೊಂಡ ಹವ್ಯಾಸದ ಭಾಗವಾಗಿ ಮೊಬೈಲ್‌ ಆ್ಯಪ್‌ ಸಿದ್ಧಪಡಿಸಿದ್ದ, ಅದರೊಂದಿಗೆ ವೆಬ್‌ಸೈಟ್‌ ಹಾಗೂ ಲೋಗೊಗಳನ್ನು ಸಹ ವಿನ್ಯಾಸಗೊಳಿಸಿದ್ದ.

ಆದಿತ್ಯನ್‌
ಆದಿತ್ಯನ್‌

ತನ್ನ ಐದನೇ ವಯಸ್ಸಿನಲ್ಲಿಯೇ ತಂತ್ರಜ್ಞಾನದ ಸೆಳೆತ ಹೆಚ್ಚಿಸಿಕೊಂಡ ಆದಿತ್ಯನ್‌, ಅದಾಗಲೇ ಕಂಪ್ಯೂಟರ್‌ ಬಳಕೆ ಪ್ರಾರಂಭಿಸಿದ್ದ. ಪ್ರಸ್ತುತ 13ನೇ ವಯಸ್ಸಿನಲ್ಲಿ ‘ಟ್ರೈನೆಟ್‌ ಸಲ್ಯೂಶನ್ಸ್‌‘ ಎಂಬ ಸಂಸ್ಥೆ ಕಾರ್ಯಾರಂಭಿಸಿರುವುದಾಗಿ ಖಲೀಜ್‌ ಟೈಮ್ಸ್‌ ವರದಿ ಮಾಡಿದೆ.

‘ಕೇರಳದ ತಿರುವಿಲ್ಲ ನನ್ನ ಹುಟ್ಟೂರು. ನಾನು 5 ವರ್ಷದವನಿದ್ದಾಗಲೇ ನನ್ನ ಕುಟುಂಬ ಇಲ್ಲಿಗೆ ಸ್ಥಳಾಂತರವಾಯಿತು. ತಂದೆ ನನಗೆ ತೋರಿಸಿಕೊಟ್ಟ ಮೊದಲ ವೆಬ್‌ಸೈಟ್‌, ಬಿಬಿಸಿ ಟೈಪಿಂಗ್‌– ಅದು ಮಕ್ಕಳಿಗಾಗಿಯೇ ಇರುವ ವೆಬ್‌ಸೈಟ್‌. ಅಲ್ಲಿ ವಿದ್ಯಾರ್ಥಿಗಳು ಟೈಪಿಂಗ್‌ ಕಲಿಯಲು ಸಾಧ್ಯವಿತ್ತು‘ ಎಂದು ಆದಿತ್ಯನ್ ಪತ್ರಿಕೆಗೆ ತಿಳಿಸಿದ್ದಾನೆ.

ಇದೀಗ ಟ್ರೈನೆಟ್‌ ಕಂಪನಿಯಲ್ಲಿ ಮೂವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರೆಲ್ಲರೂ ಆದಿತ್ಯನ್‌ ಶಾಲೆಯಲ್ಲಿ ಓದುತ್ತಿರುವ ಸಹಪಾಠಿಗಳು ಮತ್ತು ಸ್ನೇಹಿತರು. ‘ಕಂಪನಿಗೆ ಸದ್ಯ 12 ಜನ ಗ್ರಾಹಕರಿದ್ದು, ಅವರಿಗಾಗಿ ವಿನ್ಯಾಸ ಮತ್ತು ಕೋಡಿಂಗ್‌ ಸೇವೆಗಳನ್ನ ಉಚಿತವಾಗಿ ಒದಗಿಸುತ್ತಿದ್ದೇವೆ. ನಾನು ಪೂರ್ಣ ಪ್ರಮಾಣದ ಸಂಸ್ಥೆಯನ್ನುಮುನ್ನಡೆಸಲು ನನಗೆ 18 ವರ್ಷ ಆಗಬೇಕಿದೆ. ಆದರೆ, ಒಂದು ಸಂಸ್ಥೆ ಕಾರ್ಯನಿರ್ವಹಿಸುವಂತೆಯೇ ನಾವು ಮುನ್ನಡೆದಿದ್ದೇವೆಎಂದು ಸಂತಸ ವ್ಯಕ್ತಪಡಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT