ಚೇತಕ್‌ ಹೆಲಿಕಾಪ್ಟರ್‌ ಪತನ: ಸಿಬ್ಬಂದಿ ಸುರಕ್ಷಿತ

7

ಚೇತಕ್‌ ಹೆಲಿಕಾಪ್ಟರ್‌ ಪತನ: ಸಿಬ್ಬಂದಿ ಸುರಕ್ಷಿತ

Published:
Updated:

ಚೆನ್ನೈ: ತರಬೇತಿಯಲ್ಲಿ ನಿರತವಾಗಿದ್ದ ಭಾರತೀಯ ನೌಕಾಪಡೆಯ ಚೇತಕ್‌ ಸಿಎಚ್‌442 ಹೆಲಿಕಾಪ್ಟರ್‌ ಇಳಿಯುವಾಗ ಪತನಗೊಂಡ ಘಟನೆ ಅರಕೋಣಂ ಐಎನ್‌ಎಸ್‌ ರಾಜಾಲಿ ನೌಕಾನೆಲೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

‘ಡ್ರೈ ವಿಂಚಿಂಗ್‌ ಸಾರ್ಟಿ’ ಯಲ್ಲಿ ನಿರತವಾಗಿದ್ದ ವೇಳೆ ಹೆಲಿಕಾಪ್ಟರ್‌ ನೆಲಕ್ಕಪ್ಪಳಿಸಿದೆ. ಇದರ ಮುಖ್ಯ ಭಾಗ ಮತ್ತು ಟೇಲ್‌ ರೋಟರ್‌ಗಳು ತೀವ್ರವಾಗಿ ಹಾನಿಗೊಂಡಿವೆ. ಇದರಲ್ಲಿದ್ದ ಮೂವರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ನೌಕಾಪಡೆ ತಿಳಿಸಿದೆ. 

ಎಎಚ್‌ಎಲ್‌ ಇದರ ವಿನ್ಯಾಸ ಮಾಡಿದೆ. ಸರಕು, ಸಾಮಗ್ರಿ ಸಾಗಣೆ, ಆಕಸ್ಮಿಕ ಸ್ಥಳಾಂತರಿಸುವಿಕೆ, ವೈಮಾನಿಕ ಸಮೀಕ್ಷೆ ಮತ್ತು ಗಸ್ತು ತಿರುಗುವಿಕೆ, ತುರ್ತು ವೈದ್ಯಕೀಯ ಸೇವೆ, ಕಡಲಾಚೆಯ ಕಾರ್ಯಾಚರಣೆ ಮತ್ತು ಕೊಳಚೆ ಕಾರ್ಯಾಚರಣೆಗೆ ಈ ಹೆಲಿಕಾಪ್ಟರ್‌ ಬಳಸಲಾಗುತ್ತದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !