ಸುರಕ್ಷಿತ ಸ್ಥಳಕ್ಕೆ ತೆರಳಿದ ಭಾರತದ ಯಾತ್ರಾರ್ಥಿಗಳು

7

ಸುರಕ್ಷಿತ ಸ್ಥಳಕ್ಕೆ ತೆರಳಿದ ಭಾರತದ ಯಾತ್ರಾರ್ಥಿಗಳು

Published:
Updated:

ಕಠ್ಮಂಡು: ಕೈಲಾಸ ಮಾನಸ ಸರೋವರ ಯಾತ್ರೆಯಿಂದ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಸಿಲುಕಿಕೊಂಡಿದ್ದ ಭಾರತದ ಎಲ್ಲ 1,430 ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ವಿಮಾನದ ಮೂಲಕ ಕರೆದೊಯ್ಯಲಾಗಿದೆ.

ಭಾರಿ ಮಳೆ ಮತ್ತು ಭೂಕುಸಿತದಿಂದ ಹಿಲ್ಸಾ ಮತ್ತು ಸಿಮಿಕೋಟ್‌ ಜಿಲ್ಲೆಗಳಲ್ಲಿ ಈ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದರು. ಈ ಎಲ್ಲ ಯಾತ್ರಾರ್ಥಿಗಳನ್ನು ನೇಪಾಳಗುಂಜ್‌ ಮತ್ತು ಸುರ್‌ಖೇತ್‌ ನಗರಗಳಿಗೆ ಸ್ಥಳಾಂತರಿಸಲಾಗಿದೆ. ಭಾರತದ ಗಡಿ ಪ್ರದೇಶದಲ್ಲಿರುವ ಈ ನಗರಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳಿವೆ.

‘ಹಿಲ್ಸಾ ಮತ್ತು ಸಿಮಿಕೋಟ್‌ನಲ್ಲಿ ಸಿಲುಕಿಕೊಂಡಿದ್ದ ಕೊನೆಯ ತಂಡದ 160 ಮಂದಿಯನ್ನು ಸ್ಥಳಾಂತರಿಸುವ ಮೂಲಕ ಭಾರತದ ಎಲ್ಲ ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಈಗ ಅಲ್ಲಿ ಭಾರತದ ಯಾವುದೇ ಯಾತ್ರಾರ್ಥಿಗಳು ಇಲ್ಲ’ ಎಂದು ನೇಪಾಳದಲ್ಲಿನ ಭಾರತದ ರಾಯಭಾರಿ ಕಚೇರಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !