ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬ: ಹೆಚ್ಚುವರಿ ರೈಲು ಸೇವೆಗೆ ನಿರ್ಧಾರ

Last Updated 25 ಅಕ್ಟೋಬರ್ 2019, 19:26 IST
ಅಕ್ಷರ ಗಾತ್ರ

ನವದೆಹಲಿ: ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುವುದರಿಂದ ಭಾರತೀಯ ರೈಲ್ವೆಯು ಹೆಚ್ಚುವರಿಯಾಗಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ಹೆಚ್ಚುವರಿಯಾಗಿ 2,500 ಟ್ರಿಪ್‌ಗಳ ಸೇವೆಗಾಗಿ 400 ವಿಶೇಷ ರೈಲುಗಳನ್ನು ನಿಯೋಜಿಸಲಾಗಿದ್ದು, ಇವು ಕ್ರಿಸ್‌ಮಸ್‌ ವರೆಗೆ ಸಂಚರಿಸಲಿವೆ ಎಂದು ರೈಲ್ವೆ ಶುಕ್ರವಾರ ತಿಳಿಸಿದೆ. ನಿತ್ಯ ಸಂಚರಿಸುವ ರೈಲುಗಳಲ್ಲಿ ಪ್ರಯಾಣಿಕರಿಗೆ ಬರ್ತ್‌ ಸಿಗುವಂತಾಗಲು ಕೋಚ್‌ಗಳ ಸಂಖ್ಯೆಯನ್ನು ಸಹ ಹೆಚ್ಚಿಸಲಾಗುತ್ತದೆ ಎಂದೂ ತಿಳಿಸಿದೆ.

ಸಂಚಾರ ಎಲ್ಲಿ: ದೆಹಲಿ–ಪಟ್ನಾ, ದೆಹಲಿ–ಕೋಲ್ಕತ್ತ, ದೆಹಲಿ– ಮುಂಬೈ, ಮುಂಬೈ–ಲಖನೌ, ಹರಿದ್ವಾರ್–ಜಬಲ್‌ಪುರ್ ಸೇರಿ
ದಂತೆ ಇನ್ನೂ ಹಲವು ಮಾರ್ಗಗಳಲ್ಲಿ ಹೆಚ್ಚುವರಿ ರೈಲುಗಳು ಸಂಚರಿಸಲಿವೆ.

ಪರಿವರ್ತನೆ: ತನ್ನ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಭಾರತೀಯ ರೈಲ್ವೆಯು 200 ಸಲೂನ್‌ಗಳನ್ನು ‘ಪ್ರವಾಸಿ ರೈಲು’ಗಳನ್ನಾಗಿ ಪರಿವರ್ತಿಸಲು ನಿರ್ಧರಿಸಿದ್ದು, ಈ ಸಲೂನ್‌ಗಳ ನಿರ್ವಹಣೆ ಜವಾಬ್ದಾರಿಯನ್ನು ಐಆರ್‌ಸಿಟಿಸಿ ವಹಿಸಿಕೊಳ್ಳಲಿದೆ ಎಂದು ರೈಲ್ವೆ ಮೂಲಗಳು ಗುರುವಾರ ತಿಳಿಸಿವೆ.

ಸಲೂನ್‌ ವೈಶಿಷ್ಟ್ಯ: ದೂರದ ಊರುಗಳಿಗೆ ಭೇಟಿ ನೀಡುವ ರೈಲ್ವೆ ಅಧಿಕಾರಿಗಳಿಗಾಗಿ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಕೋಚ್‌ಗೆ ಸಲೂನ್‌ ಎನ್ನಲಾಗುತ್ತದೆ. ಎರಡು ಮಲಗುವ ಕೋಣೆ, ಲಾಂಜ್‌, ಅಡುಗೆ ಮನೆ, ಶೌಚಾಲಯ ಹೊಂದಿರುವ ಈ ಸಲೂನ್‌ನಲ್ಲಿ ಐದು ದಿನಗಳ ಕಾಲ ವಾಸ್ತವ್ಯ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT