ರೈಲ್ವೆ ಸೌಲಭ್ಯ: ನಿರುದ್ಯೋಗಿ ಯುವಕರಿಗೆ ಶೇ. 100 ರಿಯಾಯಿತಿ

7
ಹಿರಿಯರು, ಅಂಗವಿಕಲರು, ರೋಗಿಗಳಿಗೂ ಸೌಲಭ್ಯ

ರೈಲ್ವೆ ಸೌಲಭ್ಯ: ನಿರುದ್ಯೋಗಿ ಯುವಕರಿಗೆ ಶೇ. 100 ರಿಯಾಯಿತಿ

Published:
Updated:

ಬೆಂಗಳೂರು: ವೃದ್ಧರು, ಅನಾರೋಗ್ಯ ಪೀಡಿತರು, ಅಂಗವಿಕಲರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರು ಮತ್ತಿತರ ಹಲವು ವರ್ಗದ ಜನರಿಗೆ ರೈಲ್ವೆ ಇಲಾಖೆಯು ತನ್ನ ಟಿಕೆಟ್‌ ದರಗಳಲ್ಲಿ ರಿಯಾಯಿತಿ ಸೌಲಭ್ಯವನ್ನು ಪ್ರಕಟಿಸಿದೆ.

ಪ್ರಮುಖ 10 ವಿವಿಧ ವರ್ಗಗಳಿಗೆ ಶೇ. 25–100ರ ವರೆಗೆ ರಿಯಾಯಿತಿ ನೀಡುವ ಕುರಿತು ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. ಆದಾಗ್ಯೂ ಐಆರ್‌ಸಿಟಿಸಿ(ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ)ದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದರೆ ಹಿರಿಯ ನಾಗರಿಕರಿಗೆ ಮಾತ್ರವೇ ಈ ಸೌಲಭ್ಯ ದೊರೆಯಲಿದೆ.

ರಿಯಾಯಿತಿ ಸೌಲಭ್ಯ ಕುರಿತ ಮಾಹಿತಿ...

01. ಒಂಟಿಯಾಗಿ ಪ್ರಯಾಣಿಸುವ ಸಾಮರ್ಥ್ಯ ಹೊಂದಿಲ್ಲದ ಅಂಗವಿಕಲರು, ಪಾರ್ಶ್ವವಾಯು ಪೀಡಿತರು, ಒಂಟಿಯಾಗಿ ಇಲ್ಲವೇ ಮತ್ತೊಬ್ಬರೊಡನೆ ಪ್ರಯಾಣಿಸುವ ಅಂಧರು ಹಾಗೂ ಒಂಟಿಯಾಗಿ ಎಲ್ಲಿಯೂ ಹೋಗಲು ಶಕ್ತರಲ್ಲದ ಮಾನಸಿಕ ಅಸ್ವಸ್ಥರು ಯಾವುದೇ ಉದ್ದೇಶಕ್ಕಾಗಿ ಪ್ರಯಾಣಿಸಿದರೂ ಪ್ರಥಮ ದರ್ಜೆ, ದ್ವಿತೀಯ ದರ್ಜೆ, ಸ್ಲೀಪರ್‌ ಕೋಚ್‌, ತೃತೀಯ ದರ್ಜೆ ಎಸಿ, ಎಸಿ ಚೇರ್‌ ಕಾರ್‌ ರೈಲುಗಳ ಟಿಕೆಟ್‌ ದರದಲ್ಲಿ ಶೇ. 75ರ ರಿಯಾಯಿತಿ ಪಡೆಯಬಹುದು. 1ಎಸಿ, 2ಎಸಿ ರೈಲುಗಳ ಟಿಕೆಟ್‌ ದರದಲ್ಲಿ ಶೇ. 50ರ ರಿಯಾಯಿತಿ ಇದ್ದು, 3ಎಸಿ ಹಾಗೂ ರಾಜಧಾನಿ ಮತ್ತು ಶತಾಬ್ಧಿ ಎಸಿ ಚೇರ್‌ ಕಾರ್‌ ರೈಲುಗಳಲ್ಲಿ ಶೇ. 25ರಷ್ಟು ರಿಯಾಯಿತಿ ಸೌಲಭ್ಯವಿದೆ.

02. ಒಂಟಿಯಾಗಿ ಇಲ್ಲವೇ ಮತ್ತೊಬ್ಬರ ಜೊತೆ ಪ್ರಯಾಣಿಸುವ ಮಾತು ಬಾರದ ಹಾಗೂ ಕಿವಿ ಕೇಳದ ವ್ಯಕ್ತಿಗಳಿಗೆ ದ್ವಿತೀಯ ದರ್ಜೆ, ಸ್ಲೀಪರ್‌ ಹಾಗೂ ಪ್ರಥಮ ದರ್ಜೆ ಟಿಕೆಟ್‌ ದರದಲ್ಲಿ ಶೇ. 50ರಷ್ಟು ರಿಯಾಯಿತಿ ಇದೆ.

03. ಚಿಕಿತ್ಸೆಗಾಗಿ/ತಪಾಸಣೆಗಾಗಿ ಒಬ್ಬರೆ ಅಥವಾ ಮತ್ತೊಬ್ಬರೊಡನೆ ಪ್ರಯಾಣಿಸುವ ಕ್ಯಾನ್ಸರ್‌ ಪೀಡಿತರಿಗೆ ಪ್ರಥಮ ದರ್ಜೆ, ದ್ವಿತೀಯ ದರ್ಜೆ, ಎಸಿ ಚೇರ್‌ ಕಾರ್‌ಗಳಲ್ಲಿ ಶೇ. 75ರ ರಿಯಾಯಿತಿ ಇದೆ. ಸ್ಲೀಪರ್‌ ಮತ್ತು 3ಎಸಿ ರೈಲುಗಳಲ್ಲಿ ಶೇ. 100 ರಿಯಾಯಿತಿ ಇದ್ದು, 1ಎಸಿ ಮತ್ತು 2ಎಸಿ ರೈಲುಗಳಲ್ಲಿ ಶೇ. 50ರ ರಿಯಾಯಿತಿ ನೀಡಲಾಗುತ್ತಿದೆ.

04. ಒಂಟಿಯಾಗಿ ಅಥವಾ ಮತ್ತೊಬ್ಬರೊಡನೆ ತಪಾಸಣೆ/ಚಿಕಿತ್ಸೆಗಾಗಿ ತೆರಳುವ ಥಲಸ್ಸೇಮಿಯಾ ಪೀಡಿತರು, ಶಸ್ತ್ರಚಿಕಿತ್ಸೆಗಾಗಿ ತೆರಳುವ ಹೃದಯ ಮತ್ತು ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪ್ರಥಮ ದರ್ಜೆ, ದ್ವಿತೀಯ ದರ್ಜೆ, ಸ್ಲೀಪರ್‌, 3ಎಸಿ ಮತ್ತು ಎಸಿ ಚೇರ್‌ ಕಾರ್‌ ಟಿಕೆಟ್‌ ದರಗಳಲ್ಲಿ ಶೇ. 75ರ ರಿಯಾಯಿತಿ ನೀಡಲಾಗಿದೆ. ಉಳಿದಂತೆ 1ಎಸಿ ಮತ್ತು 2ಎಸಿ ಟಿಕೆಟ್‌ ದರಗಳಲ್ಲಿ ಶೇ. 50ರ ರಿಯಾಯಿತಿ ಸೌಲಭ್ಯವಿದೆ.

05. 60 ವರ್ಷ ಮೇಲ್ಪಟ್ಟ ಪುರುಷರಿಗೆ ಶೇ. 40 ರಷ್ಟು ಮತ್ತು 58 ವರ್ಷ ದಾಟಿದ ಮಹಿಳೆಯರಿಗೆ ಶೇ.50 ರಷ್ಟು ರಿಯಾಯಿತಿ ಸೌಲಭ್ಯವನ್ನು ಎಲ್ಲಾ ವರ್ಗದ ರೈಲುಗಳಲ್ಲಿ ನೀಡಲಾಗಿದೆ. ಶತಾಬ್ಧಿ, ರಾಜಧಾನಿ, ದುರಂತೊ ರೈಲು ಟಿಕೆಟ್‌ ದರಗಳೂ ಇದಕ್ಕೆ ಹೊರತಲ್ಲ.

06. ಸಾರ್ವಜನಿಕ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲಸದ ಸಂದರ್ಶನಕ್ಕಾಗಿ ಪ್ರಯಾಣಿಸುವ ನಿರುದ್ಯೋಗಿ ಯುವಕರಿಗೆ ಸ್ಲೀಪರ್‌ ದರ್ಜೆ ರೈಲು ಟಿಕೆಟ್‌ ದರಗಳಲ್ಲಿ ಶೇ. 50ರಷ್ಟು ಮತ್ತು ದ್ವಿತೀಯ ದರ್ಜೆ ರೈಲುಗಳಲ್ಲಿ ಶೇ. 100 ರಷ್ಟು ರಿಯಾಯಿತಿ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 27

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !