ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 22ರ ನಂತರ ಚಲಿಸುವ ವಿಶೇಷ ರೈಲುಗಳಲ್ಲೂ ವೇಟಿಂಗ್‌ ಲಿಸ್ಟ್‌: ರೈಲ್ವೆ ಇಲಾಖೆ

Last Updated 14 ಮೇ 2020, 4:58 IST
ಅಕ್ಷರ ಗಾತ್ರ

ನವದೆಹಲಿ: ಮೇ 22ರ ನಂತರ ಚಲಿಸುವ ವಿಶೇಷ ಎಸಿ ರೈಲುಗಳು ವೇಟಿಂಗ್ ಲಿಸ್ಟ್‌ ಹೊಂದಿರುತ್ತವೆ ಎಂದು ರೈಲ್ವೆ ಇಲಾಖೆ ಬುಧವಾರ ಪ್ರಕಟಿಸಿದೆ.

ಬಹುತೇಕ ವಿಶೇಷ ರೈಲುಗಳು ನಿಗದಿತ ಸಮಯದಲ್ಲಿ ಚಲಿಸಬಹುದು ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ಮೇ 22ರ ನಂತರದ ಪ್ರಯಾಣಕ್ಕಾಗಿ ಮೇ 15 ರಿಂದ ಕಾಯ್ದಿರಿಸಲಾಗುವ ಟಿಕೆಟ್‌ಗಳಿಗೆ ಈ ಬದಲಾವಣೆಗಳು ಅನ್ವಯವಾಗಲಿವೆ. ಈ ವಿಶೇಷ ರೈಲುಗಳಲ್ಲಿ ಆರ್‌ಎಸಿ ಸೌಲಭ್ಯ ಇರುವುದಿಲ್ಲ.

ಎಸಿ-3 ಶ್ರೇಣಿಗೆ 100, ಎಸಿ- 2 ಶ್ರೇಣಿಗೆ 50, ಸ್ಲೀಪರ್ ಕೋಚ್‌ಗೆ 200 ಸೀಟುಗಳನ್ನು ವೇಟಿಂಗ್‌ ಲಿಸ್ಟ್‌ಗೆ ಸಿದ್ದಪಡಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ವಿಶೇಷ ರೈಲುಗಳಲ್ಲಿ ಯಾವುದೇ ವೇಟಿಂಗ್ ಲಿಸ್ಟ್ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಈ ಹಿಂದೆ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT