ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ರೈಲು ಸೇವೆ ಆರಂಭ; ಇಲ್ಲಿದೆ ವೇಳಾಪಟ್ಟಿ, ದರ ಮತ್ತು ನಿಲ್ದಾಣದ ಮಾಹಿತಿ

ಅಕ್ಷರ ಗಾತ್ರ

ನವದೆಹಲಿ: ದೇಶವ್ಯಾಪಿಸುದೀರ್ಘ ಲಾಕ್‌ಡೌನ್ ನಂತರ ಇಂದಿನಿಂದ (ಮೇ 12, ಮಂಗಳವಾರ) ಭಾರತೀಯ ರೈಲ್ವೆಯು ರೈಲು ಸಂಚಾರಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ.ರೈಲು ಹತ್ತುವ ಮುನ್ನ ಪ್ರಯಾಣಿಕರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಅವರಿಗೆ ರೋಗ ಲಕ್ಷಣಗಳು ಇಲ್ಲದೇ ಇದ್ದರೆ ಮಾತ್ರ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು. ಪ್ರಯಾಣಿಕರು ಫೇಸ್ ಕವರ್ ಧರಿಸುವುದು ಕಡ್ಡಾಯ ಎಂದು ರೈಲ್ವೆ ಇಲಾಖೆ ಹೇಳಿದೆ.

ದೆಹಲಿ ನಿಜಾಮುದ್ದೀನ್ ನಿಲ್ದಾಣದಿಂದ ಬೆಂಗಳೂರಿಗೆ ಬರಲಿರುವ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿಗೆ(ಬೆಂಗಳೂರು ರಾಜಧಾನಿ, ಸಂಖ್ಯೆ 02692)- ಎಸಿ 3 ಟೈರ್ - ₹3,830, ಎಸಿ ಟೈರ್ 2- ₹5425 ಮತ್ತು ಎಸಿ ಟೈರ್ 1- ₹6735 ಪ್ರಯಾಣ ದರ ನಿಗದಿಪಡಿಸಲಾಗಿದೆ.

ನವದೆಹಲಿಯಿಂದ ರಾತ್ರಿ 9.15ಕ್ಕೆ ಹೊರಡಲಿರುವ ರೈಲು ಬೆಂಗಳೂರನ್ನು ಮೂರನೇ ದಿನ ಬೆಳಿಗ್ಗೆ 6.40ಕ್ಕೆ ತಲುಪಲಿದೆ. ಬೆಂಗಳೂರನ್ನು ರಾತ್ರಿ 8.30ಕ್ಕೆ ಬಿಡಲಿರುವ ರೈಲು ದೆಹಲಿಯನ್ನು ಮೂರನೇ ದಿನ ಬೆಳಿಗ್ಗೆ 5.55ಕ್ಕೆ ತಲುಪಲಿದೆ. ಝಾನ್ಸಿ, ಭೋಪಾಲ್, ನಾಗಪುರ, ಸಿಕಂದರಾಬಾದ್, ಗುಂತಕಲ್ ಮತ್ತು ಅನಂತಪುರ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ.

ಪ್ರಯಾಣಿಕರಿಗೆ ರೈಲಿನಲ್ಲಿ ಹಾಸಲು, ಹೊದೆಯಲು ರೈಲ್ವೆ ಇಲಾಖೆ ಏನನ್ನೂ ನೀಡುವುದಿಲ್ಲ.ಹವಾನಿಯಂತ್ರಿತ ಬೋಗಿಗಳಲ್ಲಿ ಉಷ್ಣತೆಯನ್ನು ಸಾಮಾನ್ಯಕ್ಕಿಂತ ಹೆಚ್ಚು ಇರಿಸಲಾಗುವುದು. ವಾತಾವರಣದಶುದ್ಧ ಗಾಳಿಯಸಂಚಾರಕ್ಕೆ ಅವಕಾಶಇರುವಂತೆ ಮಾಡಲಾಗುವುದು ಎಂದುರೈಲ್ವೆ ಇಲಾಖೆ ಅಧಿಕಾರಿಗಳು ನೀಡಿರುವಮಾಹಿತಿಯನ್ನು ತಿಳಿಸಿದೆ ಪಿಟಿಐ ವರದಿ ಮಾಡಿದೆ.

ಟಿಕೆಟ್ ಪಡೆಯುವುದು ಹೇಗೆ?

15 ರೈಲುಗಳಿಗಾಗಿ ಟಿಕೆಟ್ ಬುಕ್ ಮಾಡಲು ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಐಆರ್‌ಸಿಟಿಸಿ ಆ್ಯಪ್ ಬಳಸಬೇಕು. ಬುಕಿಂಗ್ ಮೇ 11ರ ಸಂಜೆ 4 ಗಂಟೆಯಿಂದ ಆರಂಭವಾಗಿದೆ. ತತ್ಕಾಲ್ ಸೇವೆ ಲಭ್ಯವಿರುವುದಿಲ್ಲ. ಏಜೆಂಟ್ ಮೂಲಕ ಬುಕಿಂಗ್ ಇರುವುದಿಲ್ಲ.ರೈಲುಗಳು ರಾಜಧಾನಿ ಎಕ್ಸ್‌ಪ್ರೆಸ್‌ ಮಾದರಿಯಲ್ಲಿರುತ್ತವೆ. ಮೊದಲೇ ಕಾದಿರಿಸಿದವರಿಗೆ ಮಾತ್ರಸೀಟುಗಳು ಇರಲಿವೆ. ಎಲ್ಲಾ ರೈಲುಗಳು ಎಸಿ ಬೋಗಿಗಳನ್ನು (ಎಸಿ ಟೈರ್1–2–3) ಮಾತ್ರ ಹೊಂದಿರುತ್ತವೆ.ರಾಜಧಾನಿ ರೈಲಿನ ದರದಷ್ಟೇ ಈ ರೈಲುಗಳ ದರವೂ ಇರಲಿದೆ.

ರೈಲು ನಿಲ್ದಾಣದಲ್ಲೇ ತಪಾಸಣೆ

ಪ್ರಯಾಣಿಕರನ್ನು ರೈಲು ನಿಲ್ದಾಣದಲ್ಲೇ ತಪಾಸಣೆಗೊಳಪಡಿಸಲಾಗುವುದು.ಕೋವಿಡ್-19 ರೋಗ ಲಕ್ಷಣಗಳು ಇಲ್ಲದೇ ಇದ್ದರೆ ಮಾತ್ರ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು. ಎಲ್ಲ ಪ್ರಯಾಣಿಕರು ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯ.

ಯಾವ ಮಾರ್ಗಗಳಲ್ಲಿ ಈ ರೈಲು ಸಂಚಾರ ನಡೆಸಲಿದೆ?

ಸಚಿವಾಲಯದ ಪ್ರಕಾರ 15 ರೈಲುಗಳು ಒಟ್ಟು 30 ಪ್ರಯಾಣಗಳನ್ನು ನಡೆಸಲಿದೆ. ಇವು ಹವಾನಿಯಂತ್ರಿತ ವಿಶೇಷ ರೈಲುಗಳಾಗಿದ್ದು, ನವದೆಹಲಿಯಿಂದ ಮುಂಬೈ, ಬೆಂಗಳೂರು, ಚೆನ್ನೈ ಸೇರಿದಂತೆ ದೇಶದ 15 ನಗರಗಳಿಗೆ ಈ ರೈಲುಗಳು ಸಂಚರಿಸಲಿದೆ.

ನವದೆಹಲಿಯಿಂದ ಹೊರಡುವ ವಿಶೇಷ ರೈಲುಗಳು ದಿಬ್ರೂಗಢ್, ಅಗರ್ತಲಾ, ಹೌರಾ, ಪಟನಾ, ಬಿಲಾಸ್‌ಪುರ್, ರಾಂಚಿ, ಭುವನೇಶ್ವರ್, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮು ತವಿ ತಲುಪಲಿವೆ.

ರೈಲುಗಳ ಪಟ್ಟಿ - ಎಲ್ಲಿಂದ ಎಲ್ಲಿಗೆ?

1. ನವದೆಹಲಿ- ದಿಬ್ರೂಗಢ್
2. ನವದೆಹಲಿ-ಅಗರ್ತಲಾ
3. ನವದೆಹಲಿ- ಹೌರಾ
4. ನವದೆಹಲಿ- ಪಟನಾ
5. ನವದೆಹಲಿ- ಬಿಲಾಸ್‌ಪುರ್
6. ನವದೆಹಲಿ-ರಾಂಚಿ
7. ನವದೆಹಲಿ-ಭುವನೇಶ್ವರ್
8. ನವದೆಹಲಿ -ಸಿಕಂದರಾಬಾದ್
9. ನವದೆಹಲಿ-ಬೆಂಗಳೂರು
10. ನವದೆಹಲಿ -ಚೆನ್ನೈ
11. ನವದೆಹಲಿ- ತಿರುವನಂತಪುರಂ
12. ನವದೆಹಲಿ-ಮಡಗಾಂವ್
13.ನವದೆಹಲಿ-ಮುಂಬೈ ಸೆಂಟ್ರಲ್
14. ನವದೆಹಲಿ- ಅಹಮದಾಬಾದ್
15. ನವದೆಹಲಿ- ಜಮ್ಮು ತವಿ

ವೇಳಾಪಟ್ಟಿ
ನವದೆಹಲಿ- ಮುಂಬೈ, ಪಟನಾ, ಕೊಲ್ಕತ್ತಾ, ದಿಬ್ರೂಗಢ, ಜಮ್ಮು ತವಿ, ಬೆಂಗಳೂರು, ಅಹಮದಾಬಾದ್ ಮತ್ತು ಭುವನೇಶ್ವರ್‌ಗೆ ಹೋಗುವ 8 ರೈಲುಗಳು ಪ್ರತಿದಿನ ಸಂಚರಿಸಲಿವೆ.

ನವದೆಹಲಿಯಿಂದ ಅಗರ್ತಲಾ ಮತ್ತು ಸಿಕಂದರಬಾದ್‌ ಹೋಗುವ ರೈಲುಗಳು ವಾರದಲ್ಲಿ ಒಂದು ದಿನ ಸಂಚರಿಸಲಿವೆ. ನವದೆಹಲಿಯಿಂದ ಮಡಗಾಂವ್, ರಾಂಚಿ, ಬಿಲಾಸ್‌ಪುರ್ ಮತ್ತು ಚೆನ್ನೈಗೆ ಹೋಗುವ ರೈಲುಗಳು ವಾರದಲ್ಲಿ ಎರಡು ದಿನ, ನವದೆಹಲಿಯಿಂದ ತಿರುವನಂತಪುರಕ್ಕೆ ವಾರದಲ್ಲಿ ಮೂರು ದಿನ ಸಂಚಾರ ನಡೆಸಲಿದೆ.

ಎಲ್ಲಿ ನಿಲುಗಡೆ?

ರೈಲು ಕಾರ್ಯನಿರ್ವಹಣೆಗಾಗಿರುವ ನಿಲುಗಡೆ ಮತ್ತು ಕೆಲವೇ ಕೆಲವು ನಿಲ್ದಾಣಗಳಲ್ಲಿ ಮಾತ್ರ ರೈಲು ನಿಲ್ಲಲಿದೆ.

ದರ ಎಷ್ಟು?

ರಾಜಧಾನಿ ರೈಲಿನ ದರದಷ್ಟೇ ಈ ರೈಲು ದರ ಇರಲಿದೆ. ರೈಲಿನ ಸಾಮಾನ್ಯ ದರ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿರುವಷ್ಟೇ ಇರಲಿದೆ.

ನಿಜಾಮುದ್ದೀನ್- ಬೆಂಗಳೂರು ರಾಜಧಾನಿ (ಬೆಂಗಳೂರು ರಾಜಧಾನಿ)- ಎಸಿ 3 ಟೈರ್ - ₹3,830, ಎಸಿ ಟೈರ್ 2- ₹5425 ಮತ್ತು ಎಸಿ ಟೈರ್ 1- ₹6735

ನವದೆಹಲಿ-ಮುಂಬೈ ಸೆಂಟ್ರಲ್ ರಾಜಧಾನಿ(ಮುಂಬೈ ರಾಜಧಾನಿ)- ಎಸಿ 3 ಟೈರ್ ₹2,725- , ಎಸಿ ಟೈರ್ 2-₹3,825 , ಎಸಿ ಟೈರ್ 1- ₹4730

ನಿಜಾಮುದ್ದೀನ್- ಮುಂಬೈ ಆಗಸ್ಟ್ ಕ್ರಾಂತಿ ರಾಜಧಾನಿ- ಎಸಿ 3 ಟೈರ್ - ₹2,725 , ಎಸಿ ಟೈರ್ 2-₹3,825 , ಎಸಿ ಟೈರ್ 1- ₹4,730

ನಿಜಾಮುದ್ದೀನ್- ಚೆನ್ನೈ ಸೆಂಟ್ರಲ್ (ಚೆನ್ನೈ ರಾಜಧಾನಿ)-ಎಸಿ 3 ಟೈರ್ -₹3,700 , ಎಸಿ ಟೈರ್ 2-₹4,540 , ಎಸಿ ಟೈರ್ 1- ₹6,415

ನಿಜಾಮುದ್ದೀನ್-ತಿರುವನಂತಪುರಂ ರಾಜಧಾನಿ ( ತ್ರಿವೇಂಡ್ರಂ ರಾಜಧಾನಿ)- ಎಸಿ 3 ಟೈರ್ -₹4,380 , ಎಸಿ ಟೈರ್ 2- ₹6,265, ಎಸಿ ಟೈರ್ 1- ₹7,770

ನವದೆಹಲಿ- ಹೌರಾ (ಗಯಾ ದಾರಿಯಾಗಿ) (ಕೊಲ್ಕತ್ತ ರಾಜಧಾನಿ) - ಎಸಿ 3 ಟೈರ್ - ₹2,780 , ಎಸಿ ಟೈರ್ 2-₹3,895 , ಎಸಿ ಟೈರ್ 1- ₹4,825

ನವದೆಹಲಿ- ಅಹಮದಾಬಾದ್ ರಾಜಧಾನಿ- ಎಸಿ 3 ಟೈರ್ -₹2,170 , ಎಸಿ ಟೈರ್ 2-₹3,010 , ಎಸಿ ಟೈರ್ 1- ₹3,720

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT