ಮತದಾನದಲ್ಲಿ ಹಾಕುವ ಶಾಹಿ ಅಳಿಸುವುದು ಹೇಗೆ? ಅಂತರ್ಜಾಲದಲ್ಲಿ ಅತಿ ಹೆಚ್ಚು ತಡಕಾಟ!

ಶನಿವಾರ, ಏಪ್ರಿಲ್ 20, 2019
27 °C
ಲೋಕಸಭಾ ಚುನಾವಣೆ

ಮತದಾನದಲ್ಲಿ ಹಾಕುವ ಶಾಹಿ ಅಳಿಸುವುದು ಹೇಗೆ? ಅಂತರ್ಜಾಲದಲ್ಲಿ ಅತಿ ಹೆಚ್ಚು ತಡಕಾಟ!

Published:
Updated:

ಬೆಂಗಳೂರು: ಮತದಾನದ ವೇಳೆ ಬೆರಳಿಗೆ ಹಾಕುತ್ತಾರಲ್ಲಾ, ಆ ಶಾಹಿಯನ್ನು ಅಳಿಸುವುದು ಹೇಗೆ?

ಇದೇನಪ್ಪ, ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರಷ್ಟೇ ಮುಗಿದಿದೆ. ಆಗಲೇ ಶಾಹಿ ಅಳಿಸುವ ಮಾತುಗಳಾ ಎಂದು ಅಚ್ಚರಿ ಪಡಬೇಡಿ. ಈ ಪ್ರಶ್ನೆಯನ್ನು ಕೇಳುತ್ತಿರುವುದು ನಾವಲ್ಲ, ನೆಟ್ಟಿಗರು.

ಹೌದು, ಸಾಕಷ್ಟು ನೆಟ್ಟಿಗರು ಗುರುವಾರ ಚುನಾವಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಗೂಗಲ್‌ನಲ್ಲಿ ಶೋಧಿಸಿದ್ದಾರೆ. ಅದರಲ್ಲಿ ಅತಿ ಹೆಚ್ಚು ಮಂದಿ ಮತದಾನದ ನಂತರ ಬೆರಳಿಗೆ ಹಾಕುವ ಶಾಹಿಯನ್ನು ಅಳಿಸುವುದು ಹೇಗೆ ಎನ್ನುವುದನ್ನೇ ಹುಡುಕಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆ ದೇಶದೆಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಗಲ್ಲಿಗಲ್ಲಿಗಳಲ್ಲಿಯೂ ರಾಜಕೀಯದ್ದೇ ಮಾತುಗಳು ಮಾರ್ದನಿಸುತ್ತಿವೆ. ಹೇಳಿಕೇಳಿ ಇದು ಅಂತರ್ಜಾಲ ಯುಗ. ಹೀಗಿದ್ದ ಮೇಲೆ ಅಲ್ಲಿಯೂ ಚುನಾವಣಾ ಚರ್ಚೆ ಕಾವೇರಿರುತ್ತದೆ.

ಗೂಗಲ್‌ಗೆ ಚುನಾವಣೆ ಕುರಿತ ಅತಿ ಹೆಚ್ಚು ಪ್ರಶ್ನೆಗಳು ಗುರುವಾರ ಬಂದಿವೆ. ಶಾಹಿ ಕುರಿತ ಪ್ರಶ್ನೆಯ ಜೊತೆಗೆ ಇವಿಎಂ ಯಂತ್ರದ ಬಗ್ಗೆ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣೆಯಾಗಿರುವ ಬಗ್ಗೆ ಜನ ಶೋಧಿಸಿದ್ದಾರೆ.

ಈ ಬಾರಿ ಚುನಾವಣೆಯ ಮತದಾನದ ವೇಳೆ ತೋರು ಬೆರಳಿಗೆ ಹಾಕಿರುವ ಶಾಹಿ ಗುರುತು ಸುಲಭವಾಗಿ ಅಳಿಸಿಹೋಗುತ್ತಿದೆ ಎಂಬ ಬಗ್ಗೆ ಸುದ್ದಿಗಳು ಹರಿದಾಡಿದ ನಂತರ, ಗುರುವಾರ ಮಧ್ಯಾಹ್ನದ ವೇಳೆ ಶಾಹಿಯನ್ನು ಅಳಿಸುವುದು ಹೇಗೆ ಎನ್ನುವ ಬಗ್ಗೆ ಹೆಚ್ಚು ಜನ ಹುಡುಕಿದ್ದಾರೆ.  

ಒಂದು ವಿಷಯದ ಕುರಿತು ಹುಡುಕಾಟದ ಶೇಕಡಾವರು 100 ತಲುಪಿದರೆ ಅದನ್ನು ಅತ್ಯಧಿಕ ಶೋಧಗೊಂಡ ವಿಷಯ ಎಂದು ಗೂಗಲ್‌ ಪರಿಗಣಿಸುತ್ತದೆ. ಏಪ್ರಿಲ್‌ 11ರಂದು ಮಧ್ಯಾಹ್ನ 2.44ರಲ್ಲಿ ಶಾಹಿ ಅಳಿಸುವ ಕುರಿತ ಶೋಧ ಶೇ 100ಕ್ಕೆ ತಲುಪಿತ್ತು. 2:00 ರಿಂದ 7:00 ಗಂಟೆ ನಡುವೆ ಅದು ಶೇ 50ಕ್ಕಿಂತ ಹೆಚ್ಚಿದೆ.   

ಆಂಧ್ರಪ್ರದೇಶದಲ್ಲಿ ಈ ಬಗ್ಗೆ ಅತಿ ಹೆಚ್ಚು ಶೋಧ ನಡೆಸಿದ್ದಾರೆ. ಉಳಿದಂತೆ ಕರ್ನಾಟಕ, ಉತ್ತರಖಂಡ,  ತೆಲಂಗಾಣ, ದೆಹಲಿ, ಮಹಾರಾಷ್ಟ್ರದಲ್ಲಿ, ಅಸ್ಸಾಂ ಮತ್ತು ಒಡಿಶಾದಲ್ಲಿ ಶಾಹಿ ಕುರಿತು ಹುಡುಕಾಟ ನಡೆಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 2

  Frustrated
 • 1

  Angry

Comments:

0 comments

Write the first review for this !