ಶುದ್ಧ ಗಾಳಿ: ಹೆಚ್ಚಲಿದೆ ಆಯುಷ್ಯ

7

ಶುದ್ಧ ಗಾಳಿ: ಹೆಚ್ಚಲಿದೆ ಆಯುಷ್ಯ

Published:
Updated:
Deccan Herald

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಿಗೆ ಅನುಸಾರ ದೇಶದಲ್ಲಿ ವಾಯು ಗುಣಮಟ್ಟ ಕಾಪಾಡಿಕೊಂಡರೆ ಭಾರತೀಯರ ಜೀವಿತಾವಧಿ ಸರಾಸರಿ ನಾಲ್ಕು ವರ್ಷ ಹೆಚ್ಚಲಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.‌

ವಾಯು ಮಾಲಿನ್ಯದಿಂದ ದೇಶದಲ್ಲಿ ಕೋಟ್ಯಂತರ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಲಕ್ಷಾಂತರ ಜನರು ಅಲ್ಪಾಯುಷಿಗಳಾಗುತ್ತಿದ್ದಾರೆ. ಅತೀ ಹೆಚ್ಚಿನ ಪ್ರಮಾಣದಲ್ಲಿ ಹೊರಸೂಸುತ್ತಿರುವ ಮಾಲಿನ್ಯಕ್ಕೆ ಕಡಿವಾಣ ಹಾಕಿದರೆ ಭಾರತೀಯರ ಜೀವಿತಾವಧಿ ಹೆಚ್ಚಾಗಲಿದೆ. ಅಲ್ಲದೆ, ಹಲವು ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ಸಂಶೋಧಕರ ತಂಡ ಹೇಳಿದೆ.

ಚಿಕಾಗೊ ವಿಶ್ವವಿದ್ಯಾನಿಲಯ ಮತ್ತು ಹಾರ್ವರ್ಡ್ ಕೆನ್ನೆಡಿ ಶಾಲೆಯ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಈ ತಂಡ ಭಾರತದ ವಾಯು ಗುಣಮಟ್ಟ ಸುಧಾರಿಸಲು ನೆರವಾಗುವ ನಿಟ್ಟಿನಲ್ಲಿ ‘ಎ ರೋಡ್‌ ಮ್ಯಾಪ್‌ ಟುವರ್ಡ್ಸ್‌ ಕ್ಲೀನಿಂಗ್‌ ಇಂಡಿಯಾಸ್‌ ಏರ್‌’ ಹೆಸರಿನಲ್ಲಿ ನೀಡಿರುವ ವರದಿಯಲ್ಲಿ ಪ್ರಮುಖ ಐದು ಶಿಫಾರಸುಗಳನ್ನು ಮಾಡಿದೆ.

 ಶಿಫಾರಸುಗಳೇನು
* ಮಾಲಿನ್ಯದ ಮೇಲ್ವಿಚಾರಣೆ ಸುಧಾರಣೆಗಾಗಿ ತಪಾಸಕರಿಗೆ ಪ್ರೋತ್ಸಾಹ ನೀಡುವುದು ಮತ್ತು ಹೊಂದಾಣಿಕೆ ಸಾಧಿಸುವುದು
* ಮಾಲಿನ್ಯ ನಿಯಂತ್ರಕರಿಗೆ ಆಯಾಯ ಸಮಯದ ಮಾಲಿನ್ಯಕಾರಕ ಹೊರಸೂಸುವಿಕೆ ನೈಜ ದತ್ತಾಂಶ ಒದಗಿಸುವುದು
* ಹೆಚ್ಚಿನ ಮಾಲಿನ್ಯ ಹೊರಸೂಸುವಿಕೆಗೆ ದುಬಾರಿ ಶುಲ್ಕ ವಿಧಿಸುವುದು
* ಮಾಲಿನ್ಯ ಉಂಟು ಮಾಡುವವರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು
* ಆರ್ಥಿಕ ವೆಚ್ಚ ಮತ್ತು ಮಾಲಿನ್ಯ ತಗ್ಗಿಸುವಂತಹ ಮಾರುಕಟ್ಟೆ ಬಳಕೆ ಮಾಡುವುದು

ಗಾಳಿ ಗುಣಮಟ್ಟದ ಮಾನದಂಡ
ನಾವು ಉಸಿರಾಡುವ ಗಾಳಿ ಹಾನಿಕಾರಕವಾಗಿಲ್ಲವೆಂದು ದೃಢಿಕರಿಸಬೇಕಾದರೆ, ದೂಳಿನ ಸೂಕ್ಷ್ಮ ಕಣಗಳು (ಪಿಎಂ 2.5) 24 ಗಂಟೆ ಅವಧಿಯಲ್ಲಿ 25ಯುಜಿ/ಎಂ3ರೊಳಗಿರಬೇಕು. ಇದು ವಾರ್ಷಿಕ ಸರಾಸರಿ 10 ಯುಜಿ/ಎಂ3ರಷ್ಟಿರಬೇಕು. ದೂಳಿನ ಒರಟು ಕಣಗಳು (ಪಿಎಂ10) 24 ಗಂಟೆ ಅವಧಿಯಲ್ಲಿ 50ಯುಜಿ/ಎಂ3ನಷ್ಟು ಮತ್ತು ವಾರ್ಷಿಕ 20ಯುಜಿ/3 ಇರಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಮಾನದಂಡ ನಿಗದಿಪಡಿಸಿದೆ.

ಅಂಕಿ ಅಂಶ
* ₹3.23 ಲಕ್ಷ ಕೋಟಿ–  ವಾಯುಮಾಲಿನ್ಯದಿಂದಾಗಿ ದೇಶವು ಪ್ರತಿ ವರ್ಷ ಬೆಲೆ ತೆರೆತ್ತಿರುವ ಅಂದಾಜು ಮೊತ್ತ
* 66 ಕೋಟಿ –ದೂಳಿನ ಕಣ (ಪಿಎಂ 2.5) ಅಪಾಯಕಾರಿ ಮಟ್ಟದಲ್ಲಿ ಇಲ್ಲದ, ಸುರಕ್ಷಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರ ಸಂಖ್ಯೆ

**
ಮಾಲಿನ್ಯ ತಗ್ಗಿಸುವಂತಹ ಆರ್ಥಿಕ ವೆಚ್ಚ ಯಾವಾಗಲೂ ಹೆಚ್ಚೇ ಇರುತ್ತದೆ. ಇದಕ್ಕೆ ಸುಲಭ ಪರಿಹಾರವಿಲ್ಲ. ಆದರೂ ಭಾರತದಾದ್ಯಂತ ನಡೆಸುತ್ತಿರುವ ಪ್ರಯೋಗಾತ್ಮಕ ಆವಿಷ್ಕಾರದ ಬಗ್ಗೆ ನಾವು ಆಶಾವಾದಿಯಾಗಿದ್ದೇವೆ
–ರೋಹಿಣಿ ಪಾಂಡೆ, ರಫಿಕ್ ಹರಿರಿ ವಿವಿ ಪ್ರಾಧ್ಯಾಪಕಿ ಮತ್ತು ಹಾರ್ವರ್ಡ್‌ ಕೆನೆಡಿ ಶಾಲೆ ಸಹ ನಿರ್ದೇಶಕಿ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !