ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಭೀತಿ: ಚೀನಾಕ್ಕೆ ಹೋಗದಂತೆ ಭಾರತೀಯರಿಗೆ ಸೂಚನೆ

Last Updated 29 ಜನವರಿ 2020, 20:05 IST
ಅಕ್ಷರ ಗಾತ್ರ

ನವದೆಹಲಿ: ಚೀನಾಕ್ಕೆ ಪ್ರವಾಸ ಮಾಡದಂತೆ ಕೇಂದ್ರದ ಆರೋಗ್ಯ ಸಚಿವಾಲಯ ಭಾರತೀಯರಿಗೆ ಹೊಸ ದಾಗಿ ಸಲಹೆ ನೀಡಿದ್ದು, ಚೀನಾಕ್ಕೆ ಹೋಗುವವರು ತಮ್ಮ ಆರೋಗ್ಯವನ್ನು ನಿರಂತರವಾಗಿ ಗಮನಿಸಿಕೊಳ್ಳಬೇಕು ಎಂದು ಬುಧವಾರ ಸೂಚಿಸಿದೆ.

ಉಸಿರಾಟದ ತೊಂದರೆ ಕಂಡು ಬಂದಲ್ಲಿ 24x7 ಸಹಾಯವಾಣಿ (011–23978046) ಸಂಪರ್ಕಿಸಬೇಕು ಎಂದೂ ಹೇಳಿದೆ.

ಭಾರತದಲ್ಲಿ ಈವರೆಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ಸಚಿವಾಲಯ ದೃಢಪಡಿಸಿದೆ. ಶಂಕಿತ ಪ್ರಕರಣಗಳ ರಕ್ತದ ಮಾದರಿ ಪರೀಕ್ಷೆಗೆ ಎನ್‌ಐವಿ–ಪುಣೆ ಹೊರತುಪಡಿಸಿ, ಬೆಂಗಳೂರು, ಅಲೆಪ್ಪಿ, ಹೈದರಾಬಾದ್‌ ಮತ್ತು ಮುಂಬೈಯಲ್ಲಿ ಮತ್ತೆ ನಾಲ್ಕು
ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ.

ಇಂಡಿಗೊ ವಿಮಾನ ಸಂಚಾರ ರದ್ದು: ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು– ಹಾಂಗ್‌ ಕಾಂಗ್‌ ಮತ್ತು ದೆಹಲಿ– ಚೆಂಗ್ಡು ಮಧ್ಯೆ ಪ್ರಯಾಣಿಕರ ವಿಮಾನ ಸಂಚಾರವನ್ನು ಫೆಬ್ರುವರಿ 1ರಿಂದ ರದ್ದುಗೊಳಿಸಲಾಗುವುದು ಎಂದು ಇಂಡಿಗೊ ಏರ್‌ಲೈನ್ಸ್‌ ಸಂಸ್ಥೆ ಬುಧವಾರ ತಿಳಿಸಿದೆ.

ದೆಹಲಿ–ಚೆಂಗ್ಡು ವಿಮಾನ ಸಂಚಾರ ವನ್ನು ಫೆಬ್ರುವರಿ 20ರ ವರೆಗೆ ರದ್ದುಗೊಳಿಸಲಾಗಿದೆ. ಕೋಲ್ಕತ್ತ–ಗುವಾಂಗ್‌ ನಡುವಿನ ವಿಮಾನ ಸಂಚಾರ ಮುಂದು ವರಿಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಭಾರತೀಯರನ್ನು ಕರೆತರಲು ಎರಡು ವಿಮಾನಗಳನ್ನು ಅಲ್ಲಿಗೆ ಕಳುಹಿಸುವ ಬಗ್ಗೆ ಚೀನಾದ ಅನುಮತಿಯನ್ನುಭಾರತ ಕೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಬುಧವಾರ ಆರೋಗ್ಯ ತಜ್ಞರ ತುರ್ತು ಸಭೆ ನಡೆಸಲಿದ್ದಾರೆ. ಅಂತರರಾಷ್ಟ್ರೀಯ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸುವ ಅಗತ್ಯದ ಕುರಿತು ಸಭೆ ಚರ್ಚಿಸಲಿದೆ.

ಚೀನಾ: 132 ಕ್ಕೇರಿದ ಮೃತರ ಸಂಖ್ಯೆ

ಬೀಜಿಂಗ್‌ :ಕೊರೊನಾ ವೈರಸ್‌ ಸೋಂಕಿಗೆ ಮತ್ತೆ 25 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 132 ಕ್ಕೇರಿದೆ. 6,000 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮುಂದಿನ 10 ದಿನಗಳಲ್ಲಿ ಈ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಚೀನಾದ 31 ಪ್ರಾಂತ್ಯಗಳಿಗೂ ಈ ಸೋಂಕು ವ್ಯಾಪಿಸಿದೆ. ಹುಬೆ ಪ್ರಾಂತ್ಯದಲ್ಲಿಯೇ ಈ ಸೋಂಕು ವ್ಯಾಪಕವಾಗಿ ಹರಡಿದ್ದು, 3,554 ಪ್ರಕರಣಗಳು ದೃಢಪಟ್ಟಿವೆ. 125 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸೋಂಕು ತಗುಲಿರುವ ಒಟ್ಟು ಪ್ರಕರಣಗಳ ಪೈಕಿ 1,239 ಮಂದಿಯ ಸ್ಥಿತಿ ಗಂಭೀರವಾಗಿದೆ.ಜನರು ಒಂದೆಡೆ ಸೇರುವುದನ್ನು ತಡೆಯಲು ಎಲ್ಲ ಕ್ರಮ ತೆಗೆದುಕೊಳ್ಳಲಾಗಿದೆ. ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ.ದೊಡ್ಡ ಉದ್ಯಮಗಳು ಕೆಲಸ ಸ್ಥಗಿತಗೊಳಿಸಿದ್ದು, ಮನೆಯಿಂದಲೇ ಕೆಲಸ ಮಾಡುವಂತೆ ನೌಕರರಿಗೆ ಸೂಚಿಸಿದೆ. ಹೊಸ ವರ್ಷದ ರಜೆ ಅವಧಿಯನ್ನು ಸರ್ಕಾರ ವಿಸ್ತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT