ವಿದೇಶ ಪ್ರವಾಸದಿಂದ ಮನ್ನಣೆ: ಮೋದಿ

ಶನಿವಾರ, ಮೇ 25, 2019
25 °C

ವಿದೇಶ ಪ್ರವಾಸದಿಂದ ಮನ್ನಣೆ: ಮೋದಿ

Published:
Updated:

ಕಮರ್‌ಪರ (ಪಶ್ಚಿಮ ಬಂಗಾಳ) (ಪಿಟಿಐ): ತಮ್ಮ ವಿದೇಶ ಪ್ರವಾಸಗಳನ್ನು ಉಲ್ಲೇಖಿಸಿ ಟೀಕೆ ಮಾಡುತ್ತಿದ್ದ ವಿರೋಧಪಕ್ಷಗಳಿಗೆ ಬುಧವಾರ ಉತ್ತರ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಭಾರತದ ಸಾಮರ್ಥ್ಯಕ್ಕೆ ಜಾಗತಿಕ ಮನ್ನಣೆ ಸಿಗಲು ನನ್ನ ವಿದೇಶ ಪ್ರವಾಸಗಳೇ ಕಾರಣ’ ಎಂದಿದ್ದಾರೆ.

‘ಪ್ರಧಾನಿಯಾದ ಬಳಿಕ ಮೋದಿ ಅವರು ಭಾರತಕ್ಕಿಂತ ಹೆಚ್ಚಾಗಿ ವಿದೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದು ವಿರೋಧಪಕ್ಷಗಳು ಟೀಕೆ ಮಾಡಿದ್ದವು. ಇಲ್ಲಿ ಆಯೋಜಿಸಿದ್ದ ಚುನಾವಣಾ ಸಭೆಯಲ್ಲಿ ಆ ವಿಚಾರವನ್ನು ಪ್ರಸ್ತಾಪಿಸಿದ ಮೋದಿ, ‘ಐದು ವರ್ಷಗಳ ಹಿಂದಿನವರೆಗೂ ತನ್ನ ಧ್ವನಿಯನ್ನು ಜಗತ್ತಿಗೆ ಕೇಳಿಸಲು ಭಾರತ ಹೆಣಗಾಡಬೇಕಾಗುತ್ತಿತ್ತು.

ಈಗ ಇಡೀ ವಿಶ್ವ ನಮ್ಮ ಜೊತೆಗೆ ಧ್ವನಿಗೂಡಿಸುತ್ತಿದೆ’ ಎಂದರು. ತಮ್ಮ ವಿರುದ್ಧ ಒಗ್ಗಟ್ಟಾಗಿರುವ ವಿರೋಧಪಕ್ಷಗಳನ್ನು ಟೀಕಿಸುತ್ತಾ, ‘20–25 ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಇಳಿಸಿರುವವರು ಸಹ ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಕಾಲಿಗೆ ಗೆಜ್ಜೆ ಕಟ್ಟಿ ಎಲ್ಲರೂ ಸಿದ್ಧರಾಗಿ ಕುಳಿತಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !